ಎಣ್ಣೆ ಅಂಗಡಿಗೆ ನುಗ್ಗಿ ಬಾಟಲ್ ಜೊತೆಗೆ ಸಿಸಿಟಿವಿಯ ಹಾರ್ಡ್‌ಡಿಸ್ಕ್ ಹೊತ್ತೊಯ್ದ ಚಾಲಾಕಿ ಕಳ್ಳರು !!

ಮದ್ಯದ ಅಂಗಡಿ ಬಾಗಿಲು ಒಡೆದು ಹಣ, ಮದ್ಯದ ಬಾಟಲ್ ಜೊತೆಗೆ ಸಿಸಿ ಟಿವಿಯ ಹಾರ್ಡ್‌ಡಿಸ್ಕ್ ಕೂಡ ಕಳ್ಳತನ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದಲ್ಲಿ ನಡೆದಿದೆ.

ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ರಸ್ತೆಯಲ್ಲಿ ಇರುವ ನ್ಯಾಷನಲ್ ವೈನ್ ಶಾಪ್‍ನಲ್ಲಿ ರಾತ್ರಿ ಬೀಗ ಒಡೆದು ಒಳ ನುಗ್ಗಿದ ಕಳ್ಳರು, ವೈನ್ ಶಾಪ್‍ನಲ್ಲಿದ್ದ ಮದ್ಯದ ಬಾಟಲಿ ಹಾಗೂ ಒಂದು ಸಾವಿರ ಹಣವನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ಎಸ್ಕೇಪ್ ಆಗುವಾಗ ಸಿಸಿಟಿವಿಯ ಹಾರ್ಡ್ ಡಿಸ್ಕ್ ಕೊಂಡೊಯ್ಯಲು ಮರೆತಿಲ್ಲ ಕಳ್ಳರು !!

ಮರುದಿನ ಬೆಳಗ್ಗೆ ವೈನ್ ಶಾಪ್ ಮಾಲೀಕ ಅಂಗಡಿಯನ್ನು ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ವೈನ್ ಶಾಪ್ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿ ಕಳ್ಳತನ ಅಗಿರುವ ಬಗ್ಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಸಿದ್ಧಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಕೊಂಡು ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Leave A Reply

Your email address will not be published.