ಹೀಗೂ ಉಂಟು….ಲೈಂಗಿಕ ಸಂತೃಪ್ತಿಗಾಗಿ ವ್ಯಕ್ತಿ ಮಾಡಿದ ಎಡವಟ್ಟು…ತಂದಿತು ಜೀವಕ್ಕೆ ಆಪತ್ತು ; 2 ಕೆಜಿ ಡಂಬಲ್ ಗುದನಾಳದಲ್ಲಿ!!!

ಲೈಂಗಿಕ ಸಂತೃಪ್ತಿ ಪಡೆಯಲು ದಂಪತಿಗಳು ನಾನಾ ರೀತಿಯ ಸಾಧನಗಳನ್ನು ಬಳಸಿ ಲೈಂಗಿಕ ಪರಾಕಾಷ್ಠೆ ಪಡೆಯುತ್ತಾರೆ. ಆದರೆ ಕೆಲವೊಂದು ಸಾಧನಗಳನ್ನು ಲೈಂಗಿಕ ತೃಷೆಗೆ ಬಳಸಿದರೆ ಆಗುವ ಅನಾಹುತಗಳನ್ನು ಮುಂದೆ ದಂಪತಿಗಳೇ ಎದುರಿಸಬೇಕಾಗುತ್ತದೆ. ಈ ರೀತಿಯ ಚಿತ್ರ ವಿಚಿತ್ರ ಸಾಧನ ಬಳಸಿ ಲೈಂಗಿಕ ತೃಪ್ತಿಯ ಉತ್ಕಟ ತಲುಪಲು ನೋಡಿ, ಇಲ್ಲೊಬ್ಬ ವ್ಯಕ್ತಿ ಪಟ್ಟ ಪರಿಪಾಡು ಅಷ್ಟಿಷ್ಟಲ್ಲ. ಬನ್ನಿ ಅದೇನೆಂದು ತಿಳಿಯೋಣ.

ಬ್ರೆಜಿಲ್‌ನ ವ್ಯಕ್ತಿಯೊಬ್ಬ ಲೈಂಗಿಕ ತೃಷೆಗಾಗಿ ಗುದನಾಳದಲ್ಲಿ ಡಂಬಲ್ ಅನ್ನು, ಅದು ಕೂಡಾ ಎರಡು ಕೆಜಿ ತೂಕದ್ದನ್ನು ಬಳಸಿ ಪಡಪಾರದ ಪಾಟಲು ಪಟ್ಟಿದ್ದಾನೆ. ಈತನ ಡಂಬಲ್ ನ ದಂಗಲ್ ವೀಕ್ಷಿಸಿದ ವೈದ್ಯರೇ ದಿಗ್ಭ್ರಮೆಗೊಂಡಿದ್ದಾರೆ.


Ad Widget

Ad Widget

Ad Widget

ಇಂಟರ್ನ್ಯಾಷನಲ್ ಜರ್ನಲ್ ಆಫ್ ಸರ್ಜರಿ ಕೇಸ್ ರಿಪೋರ್ಟ್ಸ್ ವರದಿ ಮಾಡಿರುವ ಪ್ರಕಾರ, 54 ವರ್ಷದ ಬ್ರೆಜಿಲಿಯನ್ ವ್ಯಕ್ತಿ ಕೆಲವು ತಿಂಗಳಿಂದ ಮಲಬದ್ಧತೆ, ವಾಕರಿಕೆ, ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಸಮಸ್ಯೆ ತೀವ್ರವಾಗುತ್ತಿದ್ದಂತೆ ವೈದ್ಯರನ್ನು ಭೇಟಿ ಮಾಡಿದ್ದಾನೆ. ಮನೌಸ್‌ನಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿದ ಆ ವ್ಯಕ್ತಿ ತನ್ನ ಸಮಸ್ಯೆಗಳ ಬಗ್ಗೆ ವೈದ್ಯರೊಂದಿಗೆ ಚರ್ಚೆ ನಡೆಸಿದನು. ವೈದ್ಯರು ಹೆಚ್ಚಿನ ಕ್ರಮ ತೆಗೆದುಕೊಳ್ಳುವ ಮುನ್ನ ಕೆಲವು ಮೆಡಿಸಿನ್ ಗಳನ್ನು ನೀಡಿ 2 ದಿನ ಕಾಯುವಂತೆ ರೋಗಿಗೆ ಸೂಚಿಸಿದ್ದರು.

ಎರಡು ದಿನಗಳ ನಂತರ ವ್ಯಕ್ತಿಯ ಸಮಸ್ಯೆಗೆ ಕಾರಣ ತಿಳಿಯದ ವೈದ್ಯರು ಎಕ್ಸ್-ರೇ ಮೊರೆ ಹೋದರು. ವ್ಯಕ್ತಿಯ ಮಲಬದ್ಧತೆ, ಹೊಟ್ಟೆನೋವು, ವಾಕರಿಕೆ ಸಮಸ್ಯೆಯನ್ನು ಪತ್ತೆ ಹಚ್ಚಲು ರೋಗಿ ದೇಹವನ್ನು ಸಂಪೂರ್ಣ ಎಕ್ಸ್ ರೇ ಮಾಡಲಾಯಿತು. ಆಗಾಲೇ ನೋಡಿ ವಿಲಕ್ಷಣ ವಸ್ತು ಒಂದು ವ್ಯಕ್ತಿಯ ದೇಹದಲ್ಲಿ ಪತ್ತೆಯಾಯಿತು ಮತ್ತು ಇದನ್ನು ಕಂಡ ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ.

ರೋಗಿಯ ಗುದನಾಳದಲ್ಲಿ ಬರೋಬ್ಬರಿ 2 ಕೆಜಿ ಲೋಹದ ಡಂಬೆಲ್ ಇದ್ದು, ಅದು ಸುಮಾರು 20 ಸೆಂ.ಮೀ ಉದ್ದವಿತ್ತು ಮತ್ತು ಅದು ಕರುಳು ಗುದನಾಳವನ್ನು ಸಂಧಿಸುವ ಜಾಗದಲ್ಲಿ ಈ ಡಂಬೆಲ್ ಲಾಕ್ ಆಗಿತ್ತು. ಈ ಡಂಬಲೇ ವ್ಯಕ್ತಿಯ e ಎಲ್ಲಾ ಸಮಸ್ಯೆಗಳಿಗೆ ಕಾರಣ ಎನ್ನಲು ಬೇರೆ ವಿವರಣೆ ಬೇಕಿರಲಿಲ್ಲ.

ಸದರಿ ವ್ಯಕ್ತಿಯ ಗುದನಾಳದಿಂದ ಡಂಬೆಲ್ ಅನ್ನು ಹೊರಕ್ಕೆ ತೆಗೆಯುವುದು ವೈದ್ಯರಿಗೆ ನಿಜಕ್ಕೂ ಸವಾಲಾಗಿತ್ತು. ಕೆಲವು ಶಸ್ತ್ರಚಿಕಿತ್ಸೆಗಳಿಂದ ಆ ಲೋಹದ ವಸ್ತುವನ್ನು ತೆಗೆಯಲು ವೈದ್ಯರು ಸಿದ್ಧತೆ ಮಾಡಿದ್ದರೂ, ಇದಕ್ಕೆ ಒಪ್ಪದ ರೋಗಿ ಯಾವುದೇ ಮನವೊಲಿಕೆಗೆ ಬಗ್ಗಲಿಲ್ಲ. ನಂತರ ದಿಕ್ಕು ತೋಚದ ವೈದ್ಯರು “ಹಸ್ತಚಾಲಿತ ” ಹೊರತೆಗೆಯುವಿಕೆಗೆ ನಿರ್ಧರಿಸಿದರು. ಅದೃಷ್ಟವಶಾತ್, ಇದಕ್ಕೆ ಒಪ್ಪಿಕೊಂಡ ವ್ಯಕ್ತಿಯಿಂದ ಆತನ ಗುದನಾಳದಲ್ಲಿದ್ದ ಡಂಬೆಲ್ ಅನ್ನು ವೈದ್ಯರು ಸ್ವತಃ ತಮ್ಮ ಕೈಗಳಿಂದ ತೆಗೆದಿದ್ದಾರೆ. ನಂತರ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಇಟ್ಟುಕೊಂಡು ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಿಸಿದ್ದಾರೆ. ಅಷ್ಟಕ್ಕೂ ಅಂತಹಾ ದೊಡ್ಡ ಲೋಹದ ಭಾರದ ವಸ್ತುವನ್ನು ಅದ್ಯಾವ ರೀತಿ ಒಳಕ್ಕೆ ಗಂಡ ಹೆಂಡ್ತಿ ಸೇರಿ ಪಾರ್ಟನರ್ ಶಿಪ್ ನಲ್ಲಿ ತುರುಕಿದ್ದಾರೆ ಎಂಬ ಬಗ್ಗೆ ಇಬ್ಬರೂ ಬಾಯಿ ಬಿಚ್ಚಿಲ್ಲ.

Leave a Reply

error: Content is protected !!
Scroll to Top
%d bloggers like this: