ಜನಜಂಗುಳಿಯಿಂದ ಬ್ರಹ್ಮೋತ್ಸವದಲ್ಲಿ ಕಾಲ್ತುಳಿತ !!| ಇಬ್ಬರು ಸಾವು, ಹಲವು ಮಂದಿಗೆ ಗಂಭೀರ ಗಾಯ

Share the Article

ಉತ್ಸವ ವೇಳೆ ಕಾಲ್ತುಳಿತ ಸಂಭವಿಸಿದ ಕಾರಣ ಇಬ್ಬರು ಸಾವನ್ನಪ್ಪಿ ಎಂಟು ಮಂದಿ ಗಂಭೀರ ಗಾಯಗೊಂಡ ಘಟನೆ ತಮಿಳುನಾಡಿನ ಮಧುರೈನಲ್ಲಿ ಚಿತ್ತಿರೈ ಬ್ರಹ್ಮೋತ್ಸವಂ ನಲ್ಲಿ ನಡೆದಿದೆ.

ವೈಗೈ ನದಿಗೆ ಕಲ್ಲಜಗರ್ ದೇವರ ಪ್ರವೇಶವನ್ನು ವೀಕ್ಷಿಸಲು ಸಾವಿರಾರು ಭಕ್ತರು ನೆರೆದಿದ್ದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ. ಮೃತ ಪುರುಷ ಮತ್ತು ಮಹಿಳೆಯ ಗುರುತು ಇನ್ನೂ ತಿಳಿದುಬಂದಿಲ್ಲ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟಂಬಕ್ಕೆ ತಲಾ 5 ಲಕ್ಷ ರೂಪಾಯಿ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ಎರಡು ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗಳಾಗಿರುವವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ವಿಶ್ವಪ್ರಸಿದ್ಧ ಶ್ರೀ ಮೀನಾಕ್ಷಿ-ಸುಂದರೇಶ್ವರ ದೇವಸ್ಥಾನದಲ್ಲಿ 12 ದಿನಗಳ ವಾರ್ಷಿಕ ಚಿತ್ತಿರೈ ಬ್ರಹ್ಮೋತ್ಸವಂ ಉತ್ಸವ ನಡೆಯುತ್ತಿದೆ. ಇದರ ಅಂಗವಾಗಿ ಇಂದು ಬೆಳಗ್ಗೆ ವೈಗೈ ನದಿಗೆ ಕಲ್ಲಜಗರ್ ದೇವರ ಪ್ರವೇಶವನ್ನು ವೀಕ್ಷಿಸಲು ತಮಿಳುನಾಡಿದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

Leave A Reply

Your email address will not be published.