ಹಳಿತಪ್ಪಿದ ದಾದರ್‌-ಪುದುಚೇರಿ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲು

ಕರ್ನಾಟಕ ಮಾರ್ಗವಾಗಿ ಸಂಚರಿಸುವ ದಾದರ್‌-ಪುದುಚೇರಿ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲು ಲಗುರುವಾರ ರಾತ್ರಿ ಮುಂಬೈನ ಮಾತುಂಗಾ ರೈಲು ನಿಲ್ದಾನದಲ್ಲಿ ಹಳಿ ತಪ್ಪಿದೆ. ಪಕ್ಕದಲ್ಲೇ ನಿಂತಿದ್ದ ಮುಂಬೈ-ಗದಗ ಎಕ್ಸ್‌ಪ್ರೆಸ್‌ ರೈಲಿಗೆ ಉಜ್ಜಿಕೊಂಡು ಹೋಗಿದೆ.

ದೇಶದ ಸುವರ್ಣ ಕ್ಷಣವನ್ನು ನೆನಪಿಸುವ ಸ್ಮರಣೀಯ ದಿನದ ಮೊದಲು ಮಾಟುಂಗಾ ಬಳಿ ಈ ರೈಲು ಅಪಘಾತ ಸಂಭವಿಸಿದೆ. ದೇಶದ ಮೊದಲ ರೈಲು ಮುಂಬೈನಿಂದ ಥಾಣೆಗೆ 16 ಏಪ್ರಿಲ್ 1853 ರಂದು ಓಡಿತ್ತು.

ರಾತ್ರಿ 9.45ರ ಸುಮಾರಿಗೆ ದಾದರ್‌ನಿಂದ ಹೊರಟ ಕೆಲವೇ ನಿಮಿಷಗಳಲ್ಲಿ ರೈಲು ಹಳಿತಪ್ಪಿ ಈ ಘಟನೆ ನಡೆದಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಪದುಚೇರಿ-ದಾದರ್‌ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 11005) ಹಾಗೂ ಛತ್ರಪತಿ ಶಿವಾಜಿ ಟರ್ಮಿನಸ್‌-ಗದಗ (ರೈಲು ಸಂಖ್ಯೆ 11139) ರದ್ದುಪಡಿಸಲಾಗಿದ್ದು,ಮುಂಬೈನ ದಾದರ್‌ ಮಾರ್ಗದಲ್ಲಿ ಈ ಘಟನೆಯಿಂದ ರೈಲು ಸಂಚಾರ ಸ್ಥಗಿತಗೊಂಡು ರಾತ್ರಿ ಇಡೀ ಪ್ರಯಾಣಿಕರು ಪರದಾಡಿದ್ದಾರೆ.

ಇಲ್ಲಿಯವರೆಗೆ ಯಾವುದೇ ಗಾಯಗಳು ವರದಿಯಾಗಿಲ್ಲ. ಒಂದು ಬೋಗಿ ಹಳಿತಪ್ಪಿತು. ಉಪನಗರ ರೈಲುಗಳು ಓಡುತ್ತಿವೆ. ಸಿಕ್ಕಿಬಿದ್ದ ಜನರನ್ನು ರಕ್ಷಿಸಲು ಸಹಾಯ ಮಾಡುತ್ತಿದೆ. 

Leave A Reply

Your email address will not be published.