ಕುಡಿದು ಬಂದು ಸ್ಟಾಫ್ ರೂಂನಲ್ಲೇ ಉಪನ್ಯಾಸಕಿಯರ ಜೊತೆ ಅಸಭ್ಯ ವರ್ತನೆ ಮಾಡಿದ ಉಪನ್ಯಾಸಕ ; ಸಿಟ್ಟುಗೊಂಡ ಮಹಿಳಾಮಣಿಗಳಿಂದ ಹಿಗ್ಗಾಮುಗ್ಗಾ ಥಳಿತ!

Share the Article

ನಿತ್ಯ ಮದ್ಯ ಸೇವಿಸಿ ಕಾಲೇಜಿಗೆ ಆಗಮಿಸುತ್ತಿದ್ದ ಉಪನ್ಯಾಸಕ, ಮಹಿಳಾ ಸಿಬ್ಬಂದಿ ಇರುವ ವಿಶ್ರಾಂತಿ ಕೊಠಡಿಗೆ ತೆರಳಿ ಅಸಭ್ಯವಾಗಿ ವರ್ತಿಸುವುದು ಮಾತ್ರವಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಘಟನೆಯಿಂದ ಬೇಸತ್ತ ಉಪನ್ಯಾಸಕಿಯರು ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆ ಖುದ್ದಾಗಿ ಸ್ವತಃ ಬೇಕಾಬಿಟ್ಟಿ ಥಳಿಸಿದ ಘಟನೆಯೊಂದು ನಡೆದಿದೆ.

ಈ ಘಟನೆ ನಡೆದಿರುವುದು ಬೆಳಗಾವಿಯ ಸರಕಾರಿ ಸರ್ದಾರ್ ಪಿಯು ಕಾಲೇಜಿನಲ್ಲಿ.

ಉಪನ್ಯಾಸಕನ ವಿರುದ್ಧ ಅಸಭ್ಯ ವರ್ತಿಸಿದ ಆರೋಪ ಕೇಳಿಬಂದಿದ್ದು, ಕಾಲೇಜಿನ ಸ್ಟಾಫ್ ರೂಮ್‌ನಲ್ಲೇ ಉಪನ್ಯಾಸಕಿಯರು ಉಪನ್ಯಾಸಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಏಪ್ರಿಲ್ 12 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕಾಲೇಜಿನ ಖಾಯಂ ಉಪನ್ಯಾಸಕನನ್ನು ಅತಿಥಿ ಉಪನ್ಯಾಸಕಿಯರು ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂಗ್ಲೀಷ್ ವಿಭಾಗದ ಖಾಯಂ ಉಪನ್ಯಾಸಕ ಅಮಿತ್ ಬಸವಮೂರ್ತಿಗೆ ಕಾಲಿನಿಂದ ಒದ್ದು ಚಪ್ಪಲಿ ಹಾಗೂ ಕೋಲಿನಿಂದ ಧರ್ಮದೇಟು ನೀಡಲಾಗಿದೆ.

ಇದೀಗ ಉಪನ್ಯಾಸಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಳಗಾವಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

Leave A Reply

Your email address will not be published.