ಬಾಬಾ ಬುಲ್ಡೋಜರ್ ಮನೆ ಮುಂದೆ ಬಂದು ನಿಂತು ಕೇವಲ ಗುರುಗುಟ್ಟಿದ ಸದ್ದಿಗೆ ಕಾರು ಕಳ್ಳರ ಬಗ್ಗೆ ಕಂಪ್ಲೀಟ್ ಮಾಹಿತಿ ಕಕ್ಕಿಬಿಟ್ಟ ಕಿಂಗ್‍ಪಿನ್
ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಗುರುಗುಟ್ಟಿದೆ. ನಿನ್ನೆ ತನ್ನ ಬುಲ್ಡೋಜರ್ ಮೂಲಕ ಕೆಡವಲಾಗುತ್ತದೆ ಎಂಬ ಭಯಕ್ಕೆ ಬಿದ್ದು ತನ್ನ ಇತರ ಎಲ್ಲ ಕಾರು ಕಳ್ಳರ ಕಿಂಗ್‍ಪಿನ್ ಒಬ್ಬಾತ ಎಲ್ಲ ಆರೋಪಿಗಳ ಹೆಸರನ್ನು ಕಕ್ಕಿಬಿಟ್ಟಿದ್ದಾನೆ.
ಈತ ನೀಡಿದ ಮಾಹಿತಿಯ ಆಧಾರದ ಮೇರೆಗೆ ಎರಡೂವರೆ ಕೋಟಿ ಮೌಲ್ಯದ 10 ಕಾರುಗಳು ಹಾಗೂ 40 ವಾಹನಗಳ ಬಿಡಿ ಭಾಗಗಳು ಪತ್ತೆಯಾಗಿದೆ. ಗ್ಯಾಂಗ್‍ನ 12 ಸದಸ್ಯರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಗ್ಯಾಂಗ್ ಸದಸ್ಯರ ವಿರುದ್ಧ ದೆಹಲಿ, ಅಮ್ರೋಹಾ, ರಾಂಪುರ, ಬದೌನ್, ಸಂಭಾಲ್, ಮೊರಾದಾಬಾದ್ ಮುಂತಾದ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಉತ್ತರ ಪ್ರದೇಶದಲ್ಲಿ ಪ್ರಾರಂಭವಾದ ಬುಲ್ ಬುಲ್ ಆಟ ಇದೀಗ ಒಂದೊಂದೇ ರಾಜ್ಯಗಳಿಗೆ ಹಬ್ಬುತ್ತಿರುವ ಸುದ್ದಿಯನ್ನು ನೀವು ಓದಿಯೇ ಇದ್ದೀರಿ. ಮೊನ್ನೆ ಗುಜರಾತ ನಲ್ಲಿ ಬುಲ್ ಡೋಜರ್ ಕಲರವ ಎಬ್ಬಿಸಿತ್ತು. ಗಲಭೆ ಎಬ್ಬಿಸಿದ್ವರ ಮನೆಗಳು ಮಟಾಷ್ ಆಗಿದ್ದವು. ನಿನ್ನೆ ಬುಲ್ಡೋಜರ್ ಮನೆಯ ಮುಂದೆ ಬಂದು ಕೇವಲ ಗುರುಗುಟ್ಟಿದ ಸದ್ದಿಗೆ ಕಳ್ಳರ ಕಿಂಗ್ ಪಿನ್ ಪೊಲೀಸರ ಕಾಲಿಗೆ ಬಿದ್ದಿದ್ದಾನೆ.
ಗ್ಯಾಂಗ್ ಸದಸ್ಯರು ಎರಡು ವರ್ಷಗಳಿಂದ ಕದ್ದ ವಾಹನಗಳನ್ನು ಗ್ರಾಮದ ಹೊರಗಿನ ಅರಣ್ಯದಲ್ಲಿ ನಿರ್ಮಿಸಿದ ಗೋದಾಮಿಗೆ ತರುತ್ತಿದ್ದರು. ಬಳಿಕ ಕಾರಿನ ಸಾಮಾಗ್ರಿಗಳನ್ನು ತೆಗೆದು ಮಾರಾಟ ಮಾಡುತ್ತಿದ್ದರು. ಪಾಕ್ಬ್ರಾದ ಗಿಂಡೌಡಾ ಗ್ರಾಮದ ನಿವಾಸಿ ನಾಸಿರುದ್ದೀನ್ ಅಲಿಯಾಸ್ ನಾಸಿರ್ ಈ ಗ್ಯಾಂಗ್‍ನ ಕಿಂಗ್‍ಪಿನ್. ಬಂದ ಖಚಿತ ಮಾಹಿತಿ ಮೇರೆಗೆ ಗಿಂಡೌಡ ಗ್ರಾಮದ ಕಿಂಗ್‍ಪಿನ್ ನಾಸೀರ್‍ನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ಸಮಯದಲ್ಲಿ ಆತ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ.
ಕೊನೆಗೆ ಎಸ್‍ಎಚ್‍ಒ ರಂಜನ್ ಶರ್ಮಾ ಅವರು ಬುಲ್ಡೋಜರ್ ಮೂಲಕ ಮನೆಯನ್ನು ಒಡೆಸಲು ಸಿದ್ಧತೆ ಮಾಡಿ ಎಂದು ಸಿಬ್ಬಂದಿಗೆ ಸೂಚಿಸಿದ್ದಾರೆ. ಆಗ ಅದೆಲ್ಲಿ ತನ್ನ ಮನೆ ನೆಲಸಮ ಆಗತ್ತೋ ಎಂಬ ಭಯಕ್ಕೆ ಬಿದ್ದ ಆರೋಪಿ ಉಳಿದ ಎಲ್ಲ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಜೊತೆಗೆ ಕದ್ದ ಕದ್ದ ಸರಕುಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ಮಾಹಿತಿಯ ಮೇರೆಗೆ ಗೋದಾಮಿನಿಂದ ಕದ್ದ 10 ಕಾರುಗಳು ಮತ್ತು 40 ವಾಹನಗಳ ಕತ್ತರಿಸಿದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊದಲು ಮೂರು ಜನರೊಂದಿಗೆ ಕೃತ್ಯ ಆರಂಭಿಸಿದರು. ಕಳ್ಳತನದಿಂದ ಲಾಭ ಬರುತ್ತಿದ್ದಂತೆ ಗ್ಯಾಂಗ್ ಸದಸ್ಯರ ಸಂಖ್ಯೆ ಹೆಚ್ಚಳವಾಗಿತ್ತು.