ಗುಪ್ತಾಂಗದಲ್ಲಿ ಮದ್ಯದ ಬಾಟಲಿ ಹಾಕಿ ಲೈಂಗಿಕ ಚಿತ್ರಹಿಂಸೆ ನೀಡಿದ ಪ್ರಖ್ಯಾತ ನಟ ; ಸ್ಟಾರ್ ನಟನ ವಿರುದ್ಧ ಗಂಭೀರ ಆರೋಪ ಮಾಡಿದ ಸ್ಟಾರ್ ನಟಿ!!!

ಸೆಲೆಬ್ರಿಟಿಗಳ ಮದುವೆಗಳು ಎಷ್ಟು ವಿಜೃಂಭಣೆಯಿಂದ ಮಾಡುತ್ತಾರೋ ಅಷ್ಟೇ ಅದನ್ನು ನೋಡಿ ಅಭಿಮಾನಿಗಳು ಎಷ್ಟು ಥ್ರಿಲ್ ಆಗುತ್ತಾರೋ ಅದೇ ರೀತಿಯಲ್ಲಿ ಸೆಲಿಬ್ರಿಟಿಗಳ ವಿಚ್ಛೇದನಗಳು ಕೂಡ ಅಭಿಮಾನಿಗಳ ಮನಸ್ಸನ್ನು ನೋಯಿಸುವುದರಲ್ಲಿ ಎರಡು ಮಾತಿಲ್ಲ.

ನಿಮಗೆ ಜಾನಿ ಡೆಪ್ ಗೊತ್ತಿರಬಹುದು. ಇವರು ಹಾಲಿವುಡ್‌ನ ಖ್ಯಾತ ನಟ. ಬ್ಲಾಕ್‌ಬಸ್ಟರ್ ಪೈರಟ್ಸ್ ಆ ಪೈಕ್ ದಿ ಕೆರೆಬ್ಬಿಯನ್ ಚಿತ್ರದಲ್ಲಿ ನಟಿಸಿದ್ದಾರೆ. ಜಾನಿ ಡೆಪ್ ಅವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಅವರ ಹೃದಯತುಂಬಿ ಆರಾಧಿಸುತ್ತಾರೆ. ಆದರೆ, ಇದೀಗ ಅ ವಿರುದ್ಧ ಕೇಳಿ ಬಂದಿರುವ ಆರೋಪ ಅಭಿಮಾನಿಗಳನ್ನು ನೋವಿನ ಕಡಲಲ್ಲಿ ಮುಳುಗಿಸಿದೆ.


Ad Widget

Ad Widget

Ad Widget

ಜಾನಿ ಡೆಪ್ 2015ರಲ್ಲಿ ಹಾಲಿವುಡ್ ನಟಿ ಆ್ಯಂಬರ್ ಹರ್ಡ್ ಎಂಬುವರ ಜೊತೆ ಮದುವೆ ಆಗುತ್ತಾರೆ. ಆದರೆ, ಕೇವಲ ಎರಡೇ ವರ್ಷದಲ್ಲಿ ಅಂದರೆ, 2017ರಲ್ಲಿ ಸ್ಟಾರ್ ದಂಪತಿ ಪರಸ್ಪರ ಬೇರೆ ಬೇರೆಯಾಗುತ್ತಾರೆ.

ಇದಾದ ಬಳಿಕ ಕೌಟುಂಬಿಕ ಕಲಹದಿಂದ ಬಳಲಿದ್ದು, ಪರಿಹಾರವಾಗಿ 350 ಕೋಟಿ ರೂಪಾಯಿ ಕೊಡಬೇಕೆಂದು ಜಾನಿ ಡೆಪ್ ವಿರುದ್ಧ ಆ್ಯಂಬರ್ ಹಡ್ ಕೋರ್ಟ್‌ನದಲ್ಲಿ ದಾವೆ ಹೂಡುತ್ತಾರೆ. ಅದೇ ರೀತಿ ಇದಕ್ಕೆ ಪ್ರತಿಯಾಗಿ ಜಾನಿ ಡೆಪ್ ಕೂಡ ಮಾನನಷ್ಟ ಮೊಕದ್ದಮೆ ಹೂಡುತ್ತಾರೆ. ಇನ್ನು ಆ್ಯಂಬರ್ ತನ್ನ ಮಾಜಿ ಪತಿ ವಿರುದ್ಧ ಗಂಭೀರ ಆರೋಪವೊಂದನ್ನು ಈಗ ಮಾಡಿದ್ದಾರೆ. ಬೆರಳನ್ನು ಕತ್ತರಿಸಿದ್ದಲ್ಲದೆ, ಮೃಗೀಯವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಿಸಿಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ.

ಆ್ಯಂಬರ್ ಪರ ವಕಾಲತ್ತು ವಹಿಸಿರುವ ವಕೀಲ ಎಲೈ ಬ್ರೆಡೆಹೊಫ್ಟ್ ಹೇಳಿಕೆ ಪ್ರಕಾರ ಹರ್ಡ್ ಅವರ ಮೇಲೆ ಕೆಲ ಹೀನ ಲೈಂಗಿಕ ಕೃತ್ಯಗಳನ್ನು ಜಾನಿ ಡೆಪ್ ಎಸಗಿದ್ದಾರಂತೆ. ನೈಟ್ ಗೌನ್ ಹರಿದು ವಿಚಿತ್ರವಾಗಿ ವರ್ತಿಸಿದ್ದಾನೆ. ಅಲ್ಲದೆ, ಆಕೆಯ ಗುಪ್ತಾಂಗಕ್ಕೆ ಮದ್ಯದ ಬಾಟಲ್ ತೂರಿಸಿ ಮೃಗೀಯವಾಗಿ ನಡೆದುಕೊಂಡಿದ್ದಾನೆ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.

58 ವರ್ಷದ ಡೆಪ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಡೆಪ್ ಪರ ವಕೀಲರಾದ ಕ್ಯಾಮಿಲ್ಲೆ ವಾಸ್ಕೆಜ್ ಹೇಳಿಕೆ ಪ್ರಕಾರ ಹರ್ಡ್ ತನ್ನ ಸಾರ್ವಜನಿಕ ಚಿತ್ರದ ಬಗ್ಗೆ ಗೀಳನ್ನು ಹೊಂದಿದ್ದಾಳೆ. ಅವಳು ಸಂತ್ರಸ್ತೆ ಎಂಬ ಪಾತ್ರದಲ್ಲೇ ಹಲವು ವರ್ಷಗಳಿಂದ ಬದುಕುತ್ತಿದ್ದಾರೆ. ಸಂತ್ರಸ್ತೆಯಾಗಿ ತಮ್ಮ ಅಭಿನಯವನ್ನು ನೀಡಲು ತಯಾರಿ ನಡೆಸುತ್ತಿದ್ದಾರೆ ಎನ್ನುವ ಮೂಲಕ ಹರ್ಡ್ ಆರೋಪ ಸುಳ್ಳು ಎಂದು ಹೇಳಿದ್ದಾರೆ.

Leave a Reply

error: Content is protected !!
Scroll to Top
%d bloggers like this: