ಜಗತ್ತಿನ ಸರ್ವಶಕ್ತ ರಾಷ್ಟ್ರ ಅಮೆರಿಕದ ಅಧ್ಯಕ್ಷನ ಮೇಲೆ ಹಿಕ್ಕೆ ಹಾಕಿದ ಹಕ್ಕಿ

ವ್ಯಕ್ತಿ ಎಷ್ಟೇ ದೊಡ್ಡವನಿರಲಿ, ಅದೆಷ್ಟೇ ಬಲಶಾಲಿ ಇರಲಿ, ಪ್ರಕೃತಿಯ ಆಗುಹೋಗುಗಳ ಮುಂದೆ ಮತ್ತು ಇತರ ಜೀವ ಸಂಕುಲಗಳ ಕೈಲಿ ಆತನೊಬ್ಬ ಮಾಮೂಲಿ ಐಟಂ ಅಷ್ಟೇ! ಇದನ್ನು ನೆನಪಿಸುವ ಘಟನೆಯೊಂದು ಅಮೇರಿಕಾದಿಂದ ವರದಿಯಾಗಿದೆ.

ಇವತ್ತಿನ ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರ ಅಮೆರಿಕನ್ ಅಧ್ಯಕ್ಷ ಜೋ ಬಿಡೆನ್ ಮೇಲೆ ಹಕ್ಕಿಯೊಂದು ಹಿಕ್ಕೆ ಹಾಕಿ ತನ್ನ ಪಾಡಿಗೆ ಹಾರಿ ಹೋಗಿದೆ. ಮೊನ್ನೆ ಅಮೆರಿಕಾದ ಲೋವಾದ ಮೆಲ್ನೋ ಸಿಟಿಯಲ್ಲಿ, ಅಮೆರಿಕದಲ್ಲಿ ಹೆಚ್ಚುತ್ತಿರುವ ಮೂಲಭೂತ ಸೌಲಭ್ಯ ಮತ್ತು ಹಣದುಬ್ಬರವನ್ನು ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ಆಗ ಆಕಾಶದಲ್ಲಿ ಲಗಾಟಿ ಹಾಕುತ್ತಾ ಬಂದ ಹಕ್ಕಿ ಈ ಬಲಿಷ್ಟ ದೇಶದ ನಾಯಕನ ಮೇಲೆ ಹಿಕ್ಕೆ ಉದುರಿಸಿದೆ. ಆ ಸಂದರ್ಭ ಜೋ ಬಿಡೆನ್ ಅವರ ಸುತ್ತ ಸದಾ ಸರ್ಪಗಾವಲು ಹಾಕಿ ನಿಂತಿರುವ ಸೆಕ್ಯೂರಿಟಿ ಟೀಮು ಗಲಿಬಿಲಿಗೊಂಡಿತ್ತು. ಆದರೆ ಬಿಡೆನ್ ಅವರು ಹಕ್ಕಿಯ ಈ ಕೃತ್ಯವನ್ನು ನಿರ್ಲಕ್ಷಿಸಿ, ಒರೆಸಿಕೊಂಡು ತಮ್ಮ ಭಾಷಣ ಮುಂದುವರೆಸಿದರು. ಆದರೆ, ಅಷ್ಟರಲ್ಲಿ ಅದರ ಫೋಟೋ ಸೆರೆಹಿಡಿದು ವ್ಯಕ್ತಿಯೊಬ್ಬರು ಟ್ವಿಟ್ಟರ್ ಗೆ ಪೋಸ್ಟ್ ಮಾಡಿದ್ದಾರೆ, ಸುದ್ದಿ ವೈರಲ್ ಆಗಿದೆ. ಘಟನೆಯ ಬಗ್ಗೆ ಹಲವರು ತಮಾಷೆಯ ಪ್ರತಿಕ್ರಿಯೆ ನೀಡಿದ್ದು, ಒಬ್ಬರು ‘ಇದಕ್ಕಾಗಿ ಪುಟಿನ್ ಅವರನ್ನು ದೂರಬೇಕು’ ಎಂದಿದ್ದಾರೆ.
https://twitter.com/i/status/1514011035149258756

ಅಮೆರಿಕಾದಲ್ಲಿ ಕಳೆದೊಂದು ವರ್ಷದಲ್ಲಿ ಹಣದುಬ್ಬರ ಪ್ರಮಾಣ 8.5% ಏರಿದೆ. ಆಹಾರ, ವಸತಿ, ಪೆಟ್ರೋಲ್ ಮತ್ತು ಇತರ ದಿನನಿತ್ಯದ ವಸ್ತುಗಳ ಬೆಲೆಗಳಲ್ಲಿ ರಾಕೆಟ್ ಏರಿಕೆ ಕಂಡು ಜನರ ಜೇಬು ಖಾಲಿ ಆಗುತ್ತಿದೆ. ಕಳೆದ 40 ವರ್ಷದ ಗರಿಷ್ಠ ಮಟ್ಟ ತಲುಪಿದೆ ಅಲ್ಲಿನ ಹಣದುಬ್ಬರ ದರ.

Leave A Reply

Your email address will not be published.