ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದಾರಾ ನಟ ವಿಶಾಲ್?

Share the Article

ಕಾಲಿವುಡ್ ಸೂಪರ್‌ಸ್ಟಾರ್ ವಿಶಾಲ್ ಯಾರಿಗೆ ತಾನೇ ಗೊತ್ತಿಲ್ಲ. ವಿಶಾಲ್ ಅವರು ಲಾಠಿ ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಸದ್ಯಕ್ಕೆ ಈಗ ಬಿಜಿಯಾಗಿದ್ದಾರೆ. ಈ ಚಿತ್ರವನ್ನು ನಟರಾದ ರಮಣ ಮತ್ತು ನಂದ ಎಂಬುವರು ನಿರ್ಮಾಣ ಮಾಡುತ್ತಿದ್ದು, ಸುನೈನಾ ವಿಶಾಲ್‌ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.

ಅಂದಹಾಗೆ ತಮಿಳುನಾಡಿನ ನಾಡಿಗರ ಸಂಗಮ ಚುನಾವಣೆಯಲ್ಲಿ ವಿಶಾಲ್ ಮತ್ತೊಮ್ಮೆ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನೂ ಗೆದ್ದುಕೊಂಡಿದ್ದಾರೆ. ಅರೇ ಇದೇನು ಏನೋನೋ ಹೇಳ್ತಾ ಇದ್ದಾರೆ ಅಂತೀರಾ? ವಿಷಯ ಅದೇನೆಂದರೆ ವಿಶಾಲ್ ವೈಯಕ್ತಿಕ ವಿಚಾರವೊಂದು ಭಾರಿ ಸುದ್ದಿಯಾಗಿದೆ. ಹೌದು, ವಿಶಾಲ್ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂಬ ಚರ್ಚೆ ಜಾಲತಾಣದಲ್ಲಿ ಬಹಳ ಜೋರಾಗಿ ಚರ್ಚೆಯಾಗ್ತಿದೆ. ಅದಕ್ಕೆ ಕಾರಣವೂ ಇದೆ. ಆ ಕಾರಣ ಏನೆಂದು ತಿಳಿಯಲು ಮುಂದೆ ಓದಿ…

ವಿಶಾಲ್ ತಮ್ಮ‌ ಸಹೋದರಿ ಅವರಿಗೆ ಹೆಣ್ಣು ಮಗು ಜನಿಸಿದೆ ಎಂದು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ‘ ನಾನು ಮತ್ತೊಮ್ಮೆ ಅಂಕಲ್ ಆಗುತ್ತಿರುವುದಿ ಖುಷಿಯ ವಿಷಯ. ನನ್ನ ಪ್ರೀತಿಯ ಸಹೋದರಿ ಐಶುಗೆ ಇಂದು ರಾಜಕುಮಾರಿ ಜನಿಸಿದ್ದಾಳೆ. ದಂಪತಿ ಮತ್ತು ಹೆಣ್ಣು ಮಗುವಿಗೆ ದೇವರು ಆಶೀರ್ವಾದಿಸಲಿ” ಎಂದು ಬರೆದಿದ್ದಾರೆ. ಇಷ್ಟೇ ಆಗಿದ್ದರೆ ಏನೂ ಆಗ್ತಾ ಇರಲಿಲ್ಲ. ಆದರೆ ಟ್ವೀಟ್ ನ ಕೊನೆಯಲ್ಲಿ, ” ಇನ್ಶಾ ಅಲ್ಲಾಹ್” ಎಂದು ಬರೆದಿದ್ದು, ಇದೀಗ ಈ ವಿಚಾರ ಚರ್ಚೆಗೆ ಗುರಿಯಾಗಿದೆ.

Leave A Reply

Your email address will not be published.