ಬೆಟ್ಟಿಂಗ್ ಸ್ಪಾಟ್ ಮೇಲೆ ಪೊಲೀಸರ ದಾಳಿ|ಎಸ್ಕೇಪ್ ಆಗಲು ಹೋಗಿ ಜೀವವನ್ನೇ ಕಳೆದುಕೊಂಡ ವ್ಯಕ್ತಿ!!

ಆಟದ ಜೋಷ್ ನಲ್ಲಿ ಬೆಟ್ಟಿಂಗ್ ತುಂಬಾ ಕಾಮನ್. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಐಪಿಎಲ್ ಬೆಟ್ಟಿಂಗ್ ಅಂದ್ರೆ ಕೇಳೋದೇ ಬೇಡ. ಇದೇ ರೀತಿ ಬೆಟ್ಟಿಂಗ್ ಸ್ಪಾಟ್ ಮೇಲೆ ಪೊಲೀಸರ ದಾಳಿ ನಡೆಸಿದಾಗ,ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ತಾಲೂಕಿನ ವಡವಾಟಿಯಲ್ಲಿ ಸ್ವಾಮಿ(35)
ಎಂಬ ವ್ಯಕ್ತಿ ಸಾವನ್ನಪ್ಪಿದವರಾಗಿದ್ದಾರೆ.


Ad Widget

Ad Widget

Ad Widget

ವಡವಾಟಿ ಗ್ರಾಮದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದ್ದ ಹಿನ್ನೆಲೆ ಗ್ರಾಮದ ಮೇಲೆ ಯರಗೇರಾ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಸ್ವಾಮಿ ಮೃತಪಟ್ಟಿದ್ದಾನೆ.

ಮೃತ ಸ್ವಾಮಿಗೆ ಕ್ರಿಕೆಟ್ ಬೆಟ್ಟಿಂಗ್ ಅಂದ್ರೆ ಏನೆಂಬುದೇ ಗೊತ್ತಿಲ್ಲ. ನನ್ನ ಪೊಲೀಸರು ಎಲ್ಲಿ ಬಂಧಿಸುತ್ತಾರೋ ಎಂದು ಹೆದರಿ ಓಡಿದ್ದು,ಈ ವೇಳೆ ಎಡವಿಬಿದ್ದು ಸ್ವಾಮಿ ಮೃತಪಟ್ಟಿದ್ದಾನೆ.ಸ್ವಾಮಿ ಸಾವಿಗೆ ಪಿಎಸ್‌ಐ ಅಂಬರೀಶ್ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಮೃತ ಸ್ವಾಮಿ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: