ಅನಂತ್ ನಾಗ್ ಬಗ್ಗೆ ಮಾತನಾಡಿದ ನಿರ್ದೇಶಕ ಪ್ರಶಾಂತ್ ನೀಲ್

ಕೆಜಿಎಫ್; ಚಾಪ್ಟರ್ 1 ಮಾಡಿದ ಮೋಡಿಯಿಂದಲೇ ಕೆಜಿಎಫ್ 2 ಸಿನಿಮಾಕ್ಕೆ ಇಷ್ಟು ದೊಡ್ಡ ನಿರೀಕ್ಷೆಗಳು ಹುಟ್ಟಿಕೊಂಡಿವೆ.‌ ಸಿನಿಮಾದಲ್ಲಿ ನಾಯಕ ರಾಕಿಭಾಯ್‌ಗೆ ಅನಂತ್‌ನಾಗ್ ಕೊಡುವ ಬಿಲ್ಡಪ್, ಪಾತ್ರ ಪರಿಚಯವನ್ನು ಅಭಿಮಾನಿಗಳು ಮರೆಯುವಂತಿಲ್ಲ. ದೊಡ್ಡ ಪಾತ್ರವನ್ನು ಪ್ರೇಕ್ಷಕರಿಗೆ ಪರಿಚಯ ಮಾಡಿಸಲು ಒಬ್ಬ ದೊಡ್ಡ ನಟನೆ ಆಗಬೇಕು ಎಂಬ ಕಾರಣಕ್ಕೆ ಅನಂತ್‌ನಾಗ್ ಅವರನ್ನು ಪ್ರಶಾಂತ್ ನೀಲ್ ಆಯ್ಕೆ ಮಾಡಿದ್ದರು. 


Ad Widget

Ad Widget

ಕೆಜಿಎಫ್​-1ರಲ್ಲಿ ಆನಂದ್​ ಇಂಗಳಗಿ ಪಾತ್ರದಲ್ಲಿ ಅನಂತ್​ ನಾಗ್​ ಕಾಣಿಸಿಕೊಂಡಿದ್ದರು. ಹಿರಿಯ ಪತ್ರಕರ್ತರಾಗಿ ಸಿನಿಮಾದ ಕಥೆಯನ್ನು ಅಚ್ಚುಕಟ್ಟಾಗಿ ವಿವರಿಸಿದ್ದರು. ಆದರೆ ಈಗ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿದ್ದು, ಪ್ರಕಾಶ್​ ರೈ ಅವರ ಪಾತ್ರವನ್ನು ಚಿತ್ರತಂಡ ಪರಿಚಯಿಸಿದೆ.


Ad Widget

ಈ ಕುರಿತು ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಮಾತನಾಡಿದ್ದಾರೆ.ಅನಂತನಾಗ್ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಅವರು ಮಧ್ಯಂತರದಲ್ಲಿ ಸಿನಿಮಾ ತಂಡ ತೊರೆದರು. ಸಿನಿಮಾ ಬಿಟ್ಟಿದ್ದ ಅವರ ವೈಯುಕ್ತಿಕ ಕಾರಣಕ್ಕೆ. ಅವರ ಇಷ್ಟವನ್ನು ನಾವು ಪ್ರಶ್ನಿಸುವುದು ಸರಿಯಲ್ಲ.  ಅವರಿಗೆ ನಟಿಸುವಂತೆ ನಾವು ಮನವಿ ಮಾಡಿದ್ದೆವು. ಕೆಜಿಎಫ್ 2 ಸಿನಿಮಾದಲ್ಲಿ ನಟಿಸಬಾರದು ಎಂಬುದು ಅನಂತ್‌ ನಾಗ್ ಅವರ ವೈಯಕ್ತಿಕ ನಿರ್ಧಾರ. ನಾವು ಅವರ ನಿರ್ಧಾರಕ್ಕೆ ಗೌರವ ಕೊಟ್ಟಿದ್ದೇವೆ. ಅನಂತ್ ನಾಗ್ ಪಾತ್ರದ ಬದಲಿಗೆ ನೀವು ನಟಿಸುತ್ತಿದ್ದೀರಿ ಎಂದು ಮೊದಲೇ ನಾನು ಪ್ರಕಾಶ್ ರೈ ಅವರಿಗೆ ಹೇಳಿದೆ. ಅವರು ಖುಷಿಯಿಂದಲೇ ಸಿನಿಮಾ ಒಪ್ಪಿಕೊಂಡರು. ಎಂದಿದ್ದಾರೆ.

ಕೆಜಿಎಫ್ ಚಾಪ್ಟರ್ 1’ರಲ್ಲಿ ಅನಂತ್ ನಾಗ್-ಮಾಳವಿಕಾ ಅವಿನಾಶ್‌ ಕಾಂಬಿನೇಷನ್ ನ ದೃಶ್ಯಗಳು ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಆ ದೃಶ್ಯಗಳು ಸಿಕ್ಕಾಪಟ್ಟೆ ವೈರಲ್ ಸಹ ಆಗಿತ್ತು. ಪಾರ್ಟ್ 2ನಲ್ಲಿ ಅನಂತ್ ನಾಗ್ ಅವರೇ ಇಲ್ಲ ಎಂದು ಹಲವರು ಅಭಿಮಾನಿಗಳು ಬೇಸರಗೊಂಡಿದ್ದಾರೆ.

Ad Widget

Ad Widget

Ad Widget
error: Content is protected !!
Scroll to Top
%d bloggers like this: