ವಧು-ವರ ಹಾರ ಬದಲಾಯಿಸಬೇಕು, ಅಷ್ಟರಲ್ಲಿ ನಡೆಯಿತು ಒಂದು ಘಟನೆ!!!

ಇತ್ತೀಚಿನ ಮದುವೆಗಳ ತಮಾಷೆಯ ತುಣುಕಿನ ವೀಡಿಯೋಗಳು ಸಾಧಾರಣವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತದೆ. ಕೆಲವೊಂದು ತಮಾಷೆಯಾಗಿದ್ದರೆ ಇನ್ನೂ ಕೆಲವು ತೀರಾ ಗಂಭೀರತೆಯನ್ನು ಪಡೆದುಕೊಂಡಿರುತ್ತದೆ‌. ಅಂಥದ್ದೇ ಒಂದು ಮದುವೆ ಸಮಾರಂಭದ ವೀಡಿಯೋ ಘಟನೆ ಇಲ್ಲಿದೆ.

ಮದುವೆ ಸಮಾರಂಭದಲ್ಲಿ ವರ ವಧುವಿಗೆ ತಾಳಿ ಕಟ್ಟಬೇಕು ಅನ್ನೋವಾಗ ನಿಲ್ಸಿ ಅಂತಾ ಯಾರಾದ್ರೂ ಬಂದು ಹೇಳೋದನ್ನು ಸಾಮಾನ್ಯವಾಗಿ ಸಿನಿಮಾದಲ್ಲಿ ನೋಡಿರ್ತೀವಿ. ಆದರೆ, ಇಲ್ಲೊಬ್ಬಳು ವಧು ಇನ್ನೇನು ಹಾರ ಬದಲಾಯಿಸಬೇಕು ಎಂದಾದಾಗ ಮದುವೆ ರದ್ದುಪಡಿಸಲು ನಿರ್ಧರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾರ ಬದಲಾಯಿಸಲಷ್ಟೇ ಬಾಕಿ ಇರುವಾಗ, ಕೋಪಗೊಂಡ ವಧುವು ತನ್ನ ತೋರ್ಬೆರಳನ್ನು ವರನ ಕಡೆಗೆ ತೋರಿಸಿ ಅವನತ್ತ ಕಿರುಚಾಡಿದ್ದಾಳೆ. ಒಂದು ಕ್ಷಣ ಮದುವೆಗೆ ಬಂದಿರೋ ಎಲ್ಲರೂ ಈ ದೃಶ್ಯಾವಳಿಯನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.

ವಧು ತಾನು ವರನನ್ನು ಮದುವೆಯಾಗುವುದಿಲ್ಲ ಎಂದು ಹೇಳುತ್ತಾಳೆ, ಕೂಡಲೇ ಆಕೆ ವೇದಿಕೆಯಿಂದ ಕೆಳಗಿಳಿಯಲು ಪ್ರಯತ್ನಿಸಿದಾಗ, ಮಹಿಳೆಯೊಬ್ಬಳು ಬಂದು ತಡೆದಿದ್ದಾಳೆ. ವರ ಕೂಡ ವೇದಿಕೆಯಿಂದ ಹೊರನಡೆದಿದ್ದಾನೆ.

ನಂತರ ವಧುವಿನ ತಾಯಿ ಅವನನ್ನು ಮಧ್ಯದಲ್ಲಿ ನಿಲ್ಲಿಸಿ, ತನ್ನ ಮಗಳನ್ನು ಮದುವೆಯಾಗುವಂತೆ ಮನವೊಲಿಸುತ್ತಾರೆ. ವರನ ತಾಯಿ ಕೂಡ ಅವನನ್ನು ವೇದಿಕೆಯತ್ತ ತಳ್ಳುತ್ತಾಳೆ. ಜನರು ಇಬ್ಬರನ್ನೂ ಬಲವಂತವಾಗಿ ಮದುವೆಯಾಗುವಂತೆ ಮನವೊಲಿಸಲು ಪ್ರಯತ್ನಿಸುತ್ತಾರೆ. ಆದರೆ, ವಧು ಮಾತ್ರ ಸಾಧ್ಯವಿಲ್ಲ ಎಂಬಂತೆ ತನ್ನ ತಲೆಯನ್ನು ಅಲ್ಲಾಡಿಸುತ್ತಾಳೆ. ಆತನೊಂದಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 7.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ವೈರಲ್ ಆಗಿದೆ.

Leave A Reply

Your email address will not be published.