ನೋಡ ನೋಡುತ್ತಿದ್ದಂತೆಯೇ ಕಾಂಕ್ರೀಟ್ ಚಪ್ಪಡಿ ಕುಸಿದು ಬೈಕ್ ಸಮೇತ ಚರಂಡಿಗೆ ಬಿದ್ದ ಐವರು !! | ಅರೆಕ್ಷಣ ಬೆಚ್ಚಿಬೀಳಿಸುವ ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಮ್ಮೆ ಭಯಾನಕ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಅಂತೆಯೇ ಇದೀಗ ನೋಡಿದವರೆಲ್ಲ ಬೆಚ್ಚಿ ಬೀಳುವಂತಹ ವೀಡಿಯೋವೊಂದು ವೈರಲ್ ಆಗಿದೆ. ನೋಡ ನೋಡುತ್ತಿದ್ದಂತೆ ಕಾಂಕ್ರಿಟ್ ಚಪ್ಪಡಿ ಕುಸಿದು ಐವರು ಮಂದಿ ಚರಂಡಿ ಒಳಗೆ ಬಿದ್ದ ಭಯಾನಕ ಘಟನೆ ರಾಜಸ್ಥಾನದ ಜೈಸರ್‌ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

ಜೈಸರ್‌ನ ಬಾಬಾ ಬಾವಿ ಏರಿಯಾದ ರೈಲು ನಿಲ್ದಾಣದ ಸಮೀಪ ಇರುವ ಪಂಕ್ಚರ್ ಶಾಪ್ ಮುಂದೆ ಈ ಘಟನೆ ಸಂಭವಿಸಿದೆ. ಏಪ್ರಿಲ್ 7 ರಂದು ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ವೀಡಿಯೋದಲ್ಲಿ ಏನಿದೆ??

ಪಂಕ್ಚರ್ ಶಾಪ್ ಮುಂದೆ ನಾಲ್ವರು ಮಾತನಾಡುತ್ತಾ ನಿಂತಿರುತ್ತಾರೆ. ಇನ್ನೊಬ್ಬ ಪಕ್ಕದಲ್ಲೇ ಮೋಟರ್‌ಬೈಕ್ ದುರಸ್ತಿ ಮಾಡುತ್ತಿರುತ್ತಾನೆ. ಕಾಂಕ್ರಿಟ್‌ನಿಂದ ಮುಚ್ಚಲಾದ ಚರಂಡಿಯ ಮೇಲೆ ವಾಹನಗಳ ಸಾಕಷ್ಟು ಟೈರ್‌ಗಳನ್ನು ಇಟ್ಟಿರಲಾಗುತ್ತದೆ. ಈ ವೇಳೆ ನೋಡ ನೋಡುತ್ತಿದ್ದಂತೆಯೇ ಕಾಂಕ್ರಿಟ್ ಚಪ್ಪಡಿ ಕುಸಿದು ಐದು ಮಂದಿಯೂ ಚರಂಡಿಯ ಒಳಗೆ ಬೀಳುತ್ತಾರೆ. ಅವರ ಮೇಲೆ ಮೋಟರ್ ಬೈಕ್ ಕೂಡ ಬೀಳುತ್ತದೆ.

ಐದು ಮಂದಿ ಚರಂಡಿ ಒಳಗೆ ಬೀಳುವುದನ್ನು ನೋಡಿ ಪಕ್ಕದಲ್ಲೇ ಇದ್ದ ಅನೇಕರು ಸಹಾಯ ಮಾಡಲು ಧಾವಿಸಿ ಬರುತ್ತಾರೆ. ಅದೃಷ್ಟವಶಾತ್ ಚರಂಡಿ ಒಣಗಿತ್ತು, ಹೀಗಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಐವರೂ ಬಚಾವ್ ಆಗಿದ್ದಾರೆ. ಭಾರೀ ತೂಕದಿಂದ ಚಪ್ಪಡಿ ಕುಸಿದಿದೆ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ಜನರು ಅನೇಕ ನಗರಗಳಲ್ಲಿ ರಸ್ತೆಬದಿಯ ಪಾದಚಾರಿ ಮಾರ್ಗಗಳು ಮತ್ತು ಚರಂಡಿಗಳ ಮೇಲೆ ಪಂಕ್ಚರ್-ರಿಪೇರಿ ಅಂಗಡಿಗಳನ್ನು ಸ್ಥಾಪಿಸುತ್ತಾರೆ. ಇಲ್ಲಿ ಕೂಡ ಅದೇ ಆಗಿದೆ. ಆದರೆ ಇಲ್ಲಿನ ಚರಂಡಿ ಮೇಲಿನ ಚಪ್ಪಡಿ ತುಂಬಾ ಹಳೆಯದಾದ ಕಾರಣ ಈ ಅವಘಡ ಸಂಭವಿಸಿದೆ. ಇಂತಹ ಅದೆಷ್ಟೋ ಚರಂಡಿ ಮೇಲಿನ ಚಪ್ಪಡಿಗಳು ಹಳೆಯದಾಗಿದ್ದು, ದುರಸ್ತಿಯ ಅಗತ್ಯವಿದೆ. ಇಲ್ಲವಾದಲ್ಲಿ ಇಂಥಹ ಘಟನೆಗಳು ಮರುಕಳಿಸುವ ಸಾಧ್ಯತೆ ಹೆಚ್ಚು ಎಂದೇ ಹೇಳಬಹುದು.

error: Content is protected !!
Scroll to Top
%d bloggers like this: