‘ಹಲ್ಲಿ’ ಮೇಲೆ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳು ; ನಾಲ್ವರ ಬಂಧನ !

ಆಘಾತಕಾರಿ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಗೊಠಾಣೆ ಗ್ರಾಮದ ಬಳಿ ಇರುವ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಂಗಾಳ ಮಾನಿಟರ್ ಹಲ್ಲಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ.


Ad Widget

Ad Widget

ಆರೋಪಿಗಳನ್ನು ಬೇಟೆಗಾರರು ಎಂದು ಗುರುತಿಸಲಾಗಿದ್ದು, ಗೊಠಾಣೆಯಲ್ಲಿರುವ ಗಭಾ ಪ್ರದೇಶದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಕೋರ್ ಝೂನ್‌ಗೆ ಪ್ರವೇಶಿಸಿ ಅಪರಾಧ ಎಸಗಿದ್ದಾರೆ.


Ad Widget

ಅಪರಾಧಿಗಳನ್ನು ಸಂದೀಪ್ ತುಕ್ರಾಮ್, ಪವಾರ್ ಮಂಗೇಶ್, ಜನಾರ್ದನ್ ಕಾಮೇಕರ್ ಮತ್ತು ಅಕ್ಷಯ್ ಸುನಿಲ್ ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರ ಅರಣ್ಯ ಇಲಾಖೆ ಆರೋಪಿಯ ಮೊಬೈಲ್ ಪರಿಶೀಲಿಸಿದಾಗ ಘಟನೆಯ ಬಗ್ಗೆ ತಿಳಿದು ಬಂದಿದೆ. ಆರೋಪಿಗಳು ಮಾನಿಟರ್ ಹಲ್ಲಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಕೃತ್ಯದ ದಾಖಲೆಯನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ.

ಸಾಂಗ್ಲಿ ಮೀಸಲು ಅರಣ್ಯದಲ್ಲಿ ನಿಯೋಜಿಸಲಾದ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಅದರಲ್ಲಿ ಅವರು ಕಾಡಿನಲ್ಲಿ ತಿರುಗುತ್ತಿರುವುದನ್ನು
ಕಾಣಬಹುದಾಗಿತ್ತು. ಸಿಸಿಟಿವಿ ಆಧಾರದ ಪ್ರಕಾರ ಇವರು ಕಾಡಿನ ಒಳಗೆ ಇದ್ದಿದ್ದು, ಆ ಕ್ಷಣ ಅಲ್ಲಿಗೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ನಾಲ್ವರಲ್ಲಿ ಒಬ್ಬರನ್ನು ಮಾತ್ರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದವರು ಓಡಿಹೋಗಿದ್ದಾರೆ. ಆದರೆ ಸಿಬ್ಬಂದಿಗಳಿಗೆ ಅಲ್ಲೊಂದು ಅತ್ಯಾಚಾರ ನಡೆದಿದೆ ಎನ್ನುವುದು ತಿಳಿದಿರಲಿಲ್ಲ. ಬಂಧನಕ್ಕೊಳಗಾದ ವ್ಯಕ್ತಿಯಿಂದ ವಶಪಡಿಸಿಕೊಂಡ ಫೋನ್‌ನಲ್ಲಿ ಬಂಗಾಳ ಮಾನಿಟರ್ ಮಾನಿಟರ್ ಹಲ್ಲಿಯ ಅತ್ಯಾಚಾರದ ವೀಡಿಯೊ ಕಂಡುಬಂದಿದ್ದು, ಅಧಿಕಾರಿಗಳೇ ಶಾಕ್ ನಲ್ಲಿ ಇದ್ದಾರೆ.

Ad Widget

Ad Widget

Ad Widget

ಫೋನ್ ನಲ್ಲಿ ಈ ಕೃತ್ಯದ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಇದರಲ್ಲಿ ನಾಲ್ವರು ಆರೋಪಿಗಳಲ್ಲಿ ಒಬ್ಬ ಮಾನಿಟರ್ ಹಲ್ಲಿಯ ಮೇಲೆ ಅತ್ಯಾಚಾರವೆಸಗುವುದು ಇದೆ. ತನಿಖೆಯ ನಂತರ, ಇತರ ಮೂವರು ಆರೋಪಿಗಳನ್ನು ನಂತರ ರತ್ನಗಿರಿ ಜಿಲ್ಲೆಯ ಹತೀವ್ ಗ್ರಾಮದಿಂದ ಬಂಧಿಸಲಾಗಿದೆ. ಇವರಿಂದ ಎರಡು ಪಿಸ್ತೂಲ್ ಹಾಗೂ ಎರಡು ದ್ವಿಚಕ್ರವಾಹನಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಆರೋಪಿಗಳು ಕೊಂಕಣದಿಂದ ಕೊಲ್ಲಾಪುರದ ಚಂದೋಳಿ ಗ್ರಾಮಕ್ಕೆ ಬೇಟೆಗೆಂದು ಬಂದಿದ್ದರು.

ಘಟನೆಯ ಬಗ್ಗೆ ಗೊಂದಲಕ್ಕೊಳಗಾಗಿರುವ ಅರಣ್ಯಾಧಿಕಾರಿಗಳು, ಆರೋಪಿಗಳ ವಿರುದ್ಧದ ಯಾವ ರೀತಿಯ ಅರೋಪಗಳನ್ನು ಹಾಕಬೇಕು ಎನ್ನುವ ಕುರಿತು ಭಾರತೀಯ ದಂಡ ಸಂಹಿತೆಯನ್ನು ಪರಿಶೀಲಿಸುತ್ತಿದ್ದಾರೆ.

ಪ್ರಾಣಿಗಳ ಮೇಲೆ ಅತ್ಯಾಚಾರ ಮಾಡಿದಲ್ಲಿ ಅವರ ಮೇಲೆ ಯಾವ ರೀತಿಯ ಆರೋಪಗಳನ್ನು ವಿಧಿಸಬಹುದು ಎನ್ನುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಗಾಳದ ಮಾನಿಟರ್ ಹಲ್ಲಿ
ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಅಡಿಯಲ್ಲಿ ಮೀಸಲು ಜಾತಿಯಾಗಿದೆ.

error: Content is protected !!
Scroll to Top
%d bloggers like this: