ಉಳ್ಳಾಲ : ಚರ್ಚ್ ಗೆ ತೆರಳಿ ಮನೆಗೆ ಮರಳಿದ ಬಾಲಕ( 9ವರ್ಷ) ದಿಢೀರ್ ನಾಪತ್ತೆ!

Share the Article

ಉಳ್ಳಾಲ : ಚರ್ಚ್ ಗೆ ತೆರಳಿ ಮನೆಗೆ ವಾಪಾಸಾಗಿದ್ದ ಬಾಲಕ ಧಿಡೀರ್ ನಾಪತ್ತೆಯಾದ ಘಟನೆ ಉಳ್ಳಾಲ ಬೈಲಿನ ಗಣೇಶನಗರದಲ್ಲಿ ನಡೆದಿದೆ.

ಬಾಲಕ ಅಪಹರಣಕ್ಕೀಡಾದ ಶಂಕೆ ವ್ಯಕ್ತವಾಗಿದ್ದು ಉಳ್ಳಾಲ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಉಳ್ಳಾಲ ಬೈಲು, ಗಣೇಶ ನಗರದ ಬಾಡಿಗೆ ಮನೆ ನಿವಾಸಿಗಳಾದ ಜಿತನ್ ರೆಸಿನ್ಹಾ ದಂಪತಿಯ – ರೋಹಿತ ಬ್ರಾಕ್ಸ್ ಪ್ರಥಮ ಪುತ್ರ ರಿಯಾನ್ (9) ನಾಪತ್ತೆಯಾದ ಬಾಲಕ. ನಾಪತ್ತೆಯಾದ ಬಾಲಕ ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ ಶಾಲೆಯಲ್ಲಿ ಮೂರನೇ ತರಗತಿ ಮುಗಿಸಿದ್ದ. ರಿಯಾನ್ ಇಂದು ಬೆಳಗ್ಗೆ ಸ್ನೇಹಿತರೊಂದಿಗೆ ತೊಕ್ಕೊಟ್ಟು ಚರ್ಚ್ ತೆರಳಿದ್ದು ಮಧ್ಯಾಹ್ನ 1.35 ಗಂಟೆಗೆ ವಾಪಾಸಾಗಿದ್ದ. ಚರ್ಚಿನಿಂದ ವಾಪಸಾದ ರಿಯಾನ್ ಗಣೇಶ್ ನಗರದ ತನ್ನ ದೊಡ್ಡಮ್ಮನ ಮನೆಗೆ ತೆರಳಿದ್ದು ಅಲ್ಲಿದ್ದ ತಾಯಿ ತಮ್ಮ ಬಾಡಿಗೆ ಮನೆಯ ಕೀಲಿ ಕೈಯನ್ನ ರಿಯಾನಲ್ಲಿ ನೀಡಿ ಮನೆಗೆ ಹೋಗಲು ತಿಳಿಸಿದ್ದಾರೆ. ರಿಯಾನ್ ತಾಯಿ ರೋಹಿತ ಅವರು 2 ಗಂಟೆ ಸುಮಾರಿಗೆ ಮನೆಗೆ ತೆರಳಿದಾಗ ಕಿಟಕಿಯಲ್ಲಿ ಮನೆಯ ಕೀಲಿ ಕೈ ಇದ್ದು ರಿಯಾನ್ ನಾಪತ್ತೆಯಾಗಿದ್ದಾನೆ. ಗಲಿ ಬಿಲಿಗೊಂಡ ರಿಯಾನ್ ಕುಟುಂಬಸ್ಥರು ಮತ್ತು ಸ್ಥಳೀಯರು ಬಾಲಕನಿಗಾಗಿ ಶೋಧ ನಡೆಸಿದ್ದಾರೆ.

ರಿಯಾನ್ 1.30 ಗಂಟೆಗೆ ಚರ್ಚಿಂದ ವಾಪಸಾದದ್ದನ್ನು
ಸ್ಥಳೀಯರು ಗಮನಿಸಿದ್ದಾರೆ. ಘಟನೆಯ ಬಗ್ಗೆ ರಿಯಾನ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಸ್ಥಳೀಯ ಮನೆಯೊಂದರ ಸಿಸಿಟಿವಿ ಪೂಟೇಜನ್ನ ಪರಿಶೀಲನೆ ನಡೆಸುತ್ತಿದ್ದಾರೆ.

ರಿಯಾನ್ ಗೆ ಇದೇ ಬರುವ ಎಪ್ರಿಲ್ 24 ರಂದು ಪೋಷಕರು ಹೋಲಿ ಕಮಿನಿಯನ್ ನಡೆಸಲು ತಯಾರಿಯಲ್ಲಿದ್ದರು ಎನ್ನಲಾಗಿದೆ.

Leave A Reply

Your email address will not be published.