ಪ್ರಿಯಕರನಿಗೋಸ್ಕರ ತನ್ನ ಮೂರು ವರ್ಷದ ಎಳೆಯ ಕಂದನನ್ನು ಕೊಲೆ ಮಾಡಿದ ಪಾಪಿ ತಾಯಿ!

ಪ್ರಿಯಕರನಿಗೋಸ್ಕರ ತನ್ನ ಮೂರು ವರ್ಷದ ಕಂದಮ್ಮನನ್ನು ತಾಯಿಯೋರ್ವಳು ಕೊಲೆ ಮಾಡಿರುವ ಘಟನೆಯೊಂದು ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ.

ತಾಯಿ ಆಸಿಯಾ ಹಾಗೂ ತಂದೆ ಮೊಹಮ್ಮದ್ ಶಮೀರ್ ಕಳೆದ ಒಂದು ವರ್ಷದ ಹಿಂದೆ ಬೇರ್ಪಟ್ಟಿದ್ದರು. ಇದರ ನಂತರ ಆಸಿಯಾ ಬೇರೊಬ್ಬ ನ ಜೊತೆ ಸಂಬಂಧವಿಟ್ಟುಕೊಂಡಿದ್ದಳು. ಆದರೆ ಈಕೆ ತನ್ನ ಪ್ರಿಯಕರನಿಗೆ ಮಗುವಿದೆ ಎಂದು
ಹೇಳಿರಲಿಲ್ಲ. ಮಗು ಇರುವ ವಿಷಯದ ಬಗ್ಗೆ ಗೊತ್ತಾಗುತ್ತಿದ್ದಂತೆ ಇಬ್ಬರ ನಡುವೆ ಜಗಳ ಆಗಿದೆ. ಈತನ್ಮಧ್ಯೆ ಪ್ರಿಯಕರ ತನ್ನಿಂದ ದೂರ ಹೋಗುತ್ತಾನೆಂಬ ಭಯದಿಂದ ಮಗುವನ್ನು ಕೊಲೆ ಮಾಡಿದ್ದಾಳೆ.


Ad Widget

Ad Widget

Ad Widget

ನಿನ್ನೆ ಬೆಳಗ್ಗೆ 10 ಗಂಟೆಗೆ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ವೇಳೆ ಪೊಲೀಸರು ವಿಚಾರಣೆ ನಡೆಸಿದಾಗ ಖರ್ಜೂರ ನುಂಗಿ ಅದು ಸಾವನ್ನಪ್ಪಿದ್ದಾಗಿ ಹೇಳಿಕೊಂಡಿದ್ದಾಳೆ.

ಆದರೆ, ಅನುಮಾನಗೊಂಡ ಪೊಲೀಸರು ಆಸಿಯಾಳನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ತಾನೇ ಮಗುವನ್ನು ಕೊಲೆ ಮಾಡಿರುವುದಾಗಿ ತಪ್ರೊಪ್ಪಿಕೊಂಡಿದ್ದಾಳೆ.

ಆರೋಪಿಯನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿ ಆಸಿಯಾ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ.

Leave a Reply

error: Content is protected !!
Scroll to Top
%d bloggers like this: