ಸಾಮೂಹಿಕ ಆತ್ಮಹತ್ಯೆಗೆ ಬೆಚ್ಚಿದ ಗ್ರಾಮ!! ಇಬ್ಬರು ಮಹಿಳೆಯರ ಸಹಿತ ಮೂವರ ಸಾವಿನ ಹಿಂದಿದೆಯಂತೆ ಅದೊಂದು ಕಾರಣ

ರಾಯಚೂರು: ಇಲ್ಲಿನ ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರೀತಿ ವಿಚಾರಕ್ಕೆ ಮೂವರ ಸಾವು ಸಂಭವಿಸಿದ ಬಗ್ಗೆ ವರದಿಯಾಗಿದೆ. ಗಂಡ ಹೆಂಡತಿ ಮಧ್ಯೆ ಇನ್ನೊಬ್ಬ ಮಹಿಳೆ ಬಂದಿರುವುದೇ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಮೃತರನ್ನು ಸೋಮನಾಥ,ವೇದಾ ಹಾಗೂ ಪಾರ್ವತಿ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಮೃತ ಸೋಮನಾಥ ಆರ್.ಟಿ.ಪಿ.ಎಸ್ ಎನ್ನುವ ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದೇ ಸಂಸ್ಥೆಯಲ್ಲಿ ಪಾರ್ವತಿ ಎನ್ನುವ ಮಹಿಳೆಯೂ ಇಂಜಿನಿಯರ್ ಆಗಿದ್ದರು.ಆದರೆ ಸೋಮನಾಥಾನಿಗೆ ಈ ಮೊದಲೇ ಮದುವೆಯಾಗಿ ಮಡದಿ ಇರುವ ವಿಚಾರ ಪಾರ್ವತಿಗೆ ತಿಳಿದಿದ್ದರೂ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಸಂಸ್ಥೆಯಲ್ಲಿ ಜೊತೆಯಾಗಿಯೇ ತಿರುಗಾಡುತ್ತಾ, ತಮ್ಮ ಪ್ರೇಮ ಪಯಣ ಮುಂದುವರಿಸಿದ್ದ ವಿಚಾರ ಅದಾಗಲೇ ಸೋಮನಾಥನ ಪತ್ನಿಯ ಕಿವಿಗೆ ಬಿದ್ದಿತ್ತು.


Ad Widget

Ad Widget

Ad Widget

ಇದೇ ವಿಚಾರವಾಗಿ ಮನೆಯಲ್ಲಿ ಸೋಮನಾಥ ಹಾಗೂ ಆತನ ಪತ್ನಿ ವೇದಾಳಿಗೆ ಜಗಳ ಪ್ರಾರಂಭವಾಗಿದ್ದು, ಪತಿ ಮಾತು ಕೇಳದ ಹಿನ್ನೆಲೆಯಲ್ಲಿ ಮನನೊಂದು ವೇದಾ ಆತ್ಮಹತ್ಯೆಗೆ ಶರಣಾಗಿದ್ದಳು. ಇತ್ತ ಕಟ್ಟಿಕೊಂಡ ಹೆಂಡತಿಯ ಮರಣದ ಸುದ್ದಿ ತಿಳಿದ ಸೋಮನಾಥ ಓಡೋಡಿ ಮನೆಗೆ ಬಂದಿದ್ದು, ಘಟನೆಯಿಂದ ತೀರಾ ನೊಂದುಕೊಂಡಿದ್ದ. ಅದೇ ಯೋಚನೆಯಲ್ಲಿ ಪ್ರತೀ ದಿನವೂ ಮುಳುಗಿದ್ದು ಮನನೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದ.

ಅತ್ತ ಸೋಮನಾಥನ ಸಾವಿನ ಸುದ್ದಿ ತಿಳಿದ ಪಾರ್ವತಿ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತೆಯಲ್ಲಿ ಬದುಕುಳಿದಿದ್ದಳು. ಆದರೂ ತನ್ನಿಂದಾಗಿ ಅನ್ಯೋನ್ಯವಾಗಿದ್ದ ದಂಪತಿಗಳ ದುರಂತ ಅಂತ್ಯವಾಯಿತು ಎಂದು ಕೊರಗಿದ್ದ ಪಾರ್ವತಿ ಮತ್ತೊಮ್ಮೆ ಆತ್ಮಹತ್ಯೆಗೆ ಯತ್ನಿಸಿ ಇಹಲೋಕ ತ್ಯಜಿಸಿದ್ದಾಳೆ. ಒಟ್ಟಿನಲ್ಲಿ ತ್ರಿಕೋನ ಪ್ರೇಮ ಪ್ರಕರಣದಲ್ಲಿ ಮೂರು ಜೀವಗಳು ದುರಂತವಾಗಿ ಅಂತ್ಯ ಕಂಡಿದೆ.

Leave a Reply

error: Content is protected !!
Scroll to Top
%d bloggers like this: