ಹಾಡಹಗಲೇ ಮುಸುಕು ಧರಿಸಿ ಬಂದ ಯುವಕರ ಗುಂಪೊಂದು ಕಾರನ್ನು ಅಡ್ಡಗಟ್ಟಿ ದಾಳಿ|ಮೊಬೈಲ್​ನಲ್ಲಿ ಸೆರೆ ಹಿಡಿದ ದೃಶ್ಯ ವೈರಲ್!

ಮೈಸೂರು: ಹಾಡಹಗಲೇ ಎಂಟು ಜನರ ಯುವಕರ ಗುಂಪೊಂದು ಮುಸುಕು ಧರಿಸಿ ಕಾರು ಅಡ್ಡಗಟ್ಟಿ ದೊಣ್ಣೆಗಳನ್ನು ಹಿಡಿದು ಕಾರಿನ ಮೇಲೆ ದಾಳಿ ಮಾಡಿರುವ ಆಶ್ಚರ್ಯಕರ ಘಟನೆ ಮೈಸೂರು ಹಾಗೂ ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ಕಡಕೊಳ ಬಳಿ ನಡೆದಿದೆ.

 

ಕಾರು ಚಾಲಕ ಪಾರಾಗಲು ಯತ್ನಿಸಿದರೂ ಬಿಡದ ಗುಂಪು, ಆತನನ್ನು ಹಿಡಿದು ಕರೆ ತಂದು ಒಳಗೆ ತಳ್ಳಿ ಕಾರಿನ ಸಮೇತ ಪರಾರಿಯಾಗಿದ್ದಾರೆ ಎನ್ನಲಾಗಿದೆ.ಸುಮಾರು 3 ನಿಮಿಷಗಳ ಕಾಲ ಈ ಕೃತ್ಯ ಎಸಗಲಾಗಿದ್ದು, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆಯಾ ಎಂಬ ಅನುಮಾನ ಮೂಡಿದೆ. ಎರಡು ಮೂರು ನಿಮಿಷದಲ್ಲೇ ಎಲ್ಲವೂ ಮುಗಿದಿದ್ದು, ಕಾರಿನ ಸಮೇತ ಆಗಂತುಕರು ಎಸ್ಕೇಪ್ ಆಗಿದ್ದಾರೆ.

ಇದೇ ವೇಳೆ ಎದುರಿಗೆ ಬರುತ್ತಿದ್ದ ವಾಹನದಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್​ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಸದ್ಯ ಈ ಘಟನೆಯ ದೃಶ್ಯಗಳು ಪೊಲೀಸರ ಕೈ ಸೇರಿದ್ದು,ಸಿಸಿ ಟಿವಿ ದೃಶ್ಯಗಳನ್ನು ಕಲೆ ಹಾಕಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಂಜನಗೂಡು ಊಟಿ ಹೈವೇನಲ್ಲಿ ಈ ಘಟನೆ ನಡೆದಿದ್ದು, ಖಾಕಿ ಫುಲ್ ಅಲರ್ಟ್ ಆಗಿದೆ. ಹೆದ್ದಾರಿಯಲ್ಲಿ ಗಸ್ತು ಹೆಚ್ಚಿದ್ದು, ಅನುಮಾನ ಬಂದ ವ್ಯಕ್ತಿಗಳನ್ನ ವಿಚಾರಣೆ ಮಾಡಲಾಗುತ್ತಿದೆ. ಚೆಕ್ ಪೋಸ್ಟ್ ಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಇನ್ನು, ಘಟನೆ ಸಂಬಂಧ ವಿಡಿಯೋ ತುಣುಕು ಲಭ್ಯವಾಗಿದ್ದು, ಅದನ್ನೇ ಪ್ರಮುಖ ಸಾಕ್ಷ್ಯ ಅಂತ ಪರಿಗಣಿಸಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Leave A Reply

Your email address will not be published.