ವಿದ್ಯಾರ್ಥಿಗಳೇ ಗಮನಿಸಿ: ಇಂದು ‘SSLC ಪರೀಕ್ಷೆ’ಯ ಕೀ ಉತ್ತರ ಪ್ರಕಟ!

ಬೆಂಗಳೂರು: ರಾಜ್ಯದಲ್ಲಿ ಮಾರ್ಚ್ 28 ರಿಂದ ಪ್ರಾರಂಭಗೊಂಡಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆ ಏಪ್ರಿಲ್ 11ರವರೆಗೆ ನಡೆದಿದ್ದು, ನಿನ್ನೆಗೆ ಕೊನೆಗೊಂಡಿದೆ. ಈ ಬೆನ್ನಲ್ಲೇ, ಇಂದು ಪರೀಕ್ಷೆಗೆ ಸಂಬಂಧಪಟ್ಟಂತೆ ಎಲ್ಲಾ ವಿಷಯಗಳ ಕೀ ಉತ್ತರವನ್ನು ಪ್ರಕಟಿಸಲಾಗುತ್ತಿದೆ.

ವಿದ್ಯಾರ್ಥಿಗಳು ಇಂದು ಎಸ್ಎಸ್ಎಲ್ಸಿ ಮಂಡಳಿಯ ವೆಬ್ ಸೈಟ್ ನಲ್ಲಿ ಪ್ರಕಟಿಸುವಂತ ಕೀ ಉತ್ತರಗಳಿಗೆ, ಮೂರು ದಿನಗಳಲ್ಲಿ ಆಕ್ಷೇಪಣೆ ಇದ್ದರೆ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗುತ್ತಿದೆ.

ಈ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳು ಇಂದು ಪ್ರಕಟಿಸುವಂತ ಕೀ ಉತ್ತರಕ್ಕೆ ತಮ್ಮ ಆಕ್ಷೇಪವನ್ನು ಮಂಡಳಿಯ ಜಾಲತಾಣಕ್ಕೆ ಬೇಟಿ ನೀಡಬೇಕು. ಲಾಗಿನ್ ಆಗಲು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು. ಆ ನಂತ್ರ ಬರೋ ಓಟಿಪಿ ಬಳಸಿ, ಲಾಗಿನ್ ಆಗಿ, ಕೀ ಉತ್ತರಕ್ಕೆ ತಮ್ಮ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.