ಒಂದೇ ಉಸಿರಿನಲ್ಲಿ ಹನುಮಾನ್ ಚಾಲೀಸಾ ಹಾಡಿದ ಖ್ಯಾತ ಗಾಯಕ ಶಂಕರ್ ಮಹಾದೇವನ್ !! | ಭಕ್ತಿಯ ಕಡಲಲ್ಲಿ ಮುಳುಗೇಳಿಸುವ ಈ ವೀಡಿಯೋ ಇದೀಗ ವೈರಲ್

ನೀನೇ ರಾಮ.. ನೀನೇ ಶ್ಯಾಮ.. ನೀನೆ ಅಲ್ಲಾ.. ನೀನೆ ಏಸು.. ಈ ಹಾಡು ಕೇಳಿದಾಗಲೆಲ್ಲ ನೆನಪಾಗುವುದು ಖ್ಯಾತ ಹಿನ್ನೆಲೆ ಗಾಯಕ ಮತ್ತು ಅತ್ಯುತ್ತಮ ಸಂಗೀತ ಸಂಯೋಜಕ ಶಂಕರ್ ಮಹಾದೇವನ್‌. ಇವರು ಸಂಗೀತ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಹಲವಾರು ಪ್ರಶಸ್ತಿಗಳನ್ನು ತಬ್ಬಿದ್ದಾರೆ. ಅವರ ಸಂಗೀತಕ್ಕೆ ಮಾರುಹೋಗದವರೇ ಇಲ್ಲ. ಕೇವಲ ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ.

ಒಂದೇ ಉಸಿರಲ್ಲಿ ಹಾಡುವ ಪರಿಕಲ್ಪನೆಯನ್ನು ಬಾಲಿವುಡ್ ಗೆ ಪರಿಚಯಿಸಿದ ಕೀರ್ತಿ ಇವರಿಗಿದೆ. ಈಗ ಅದೇ ಸಾಲಿನಲ್ಲಿ, ಶಂಕರ್ ಮಹಾದೇವನ್ ಮೊದಲ ಬಾರಿಗೆ ಒಂದೇ ಉಸಿರಲ್ಲಿ ಹನುಮಾನ್ ಚಾಲೀಸಾವನ್ನು ಹಾಡಿದ್ದು, ಅದರ ವೀಡಿಯೋ ಇದೀಗ ಬಿಡುಗಡೆಯಾಗಿದೆ. ಆ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಈ ವೀಡಿಯೋದಲ್ಲಿ ಶಂಕರ್ ಮಹಾದೇವನ್ ಅವರು ಅದ್ಭುತವಾದ ಹನುಮಾನ್ ಚಾಲೀಸಾವನ್ನು ಹಾಡುತ್ತಿದ್ದಾರೆ. ಈ ವಿಶಿಷ್ಟವಾದ ಹನುಮಾನ್ ಚಾಲೀಸಾವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಭಕ್ತರ ವೀಕ್ಷಣೆ ಪಡೆದಿದೆ.

error: Content is protected !!
Scroll to Top
%d bloggers like this: