ಈ ವಾರದ ಕೊನೆಯಲ್ಲಿ ಸಾಲು ಸಾಲು ರಜೆ ಹಿನ್ನೆಲೆ | ಕೆಎಸ್ ಆರ್ ಟಿಸಿಯಿಂದ 300 ಹೆಚ್ಚುವರಿ ಬಸ್ ಗಳ ವ್ಯವಸ್ಥೆ !!
ಗುರುವಾರದಿಂದ ಸಾಲು ಸಾಲು ರಜೆ ಇರುವ ಕಾರಣ ಊರಿಗೆ ತೆರಳುವ ಪ್ರಯಾಣಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿಯಿಂದ 300 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನಿಂದ ಬೆಳಗಾವಿ, ಕುಂದಾಪುರ, ಧರ್ಮಸ್ಥಳ, ಗೋಕರ್ಣ, ಹೊರನಾಡು, ಮಂಗಳೂರು, ಮಡಿಕೇರಿ, ಶೃಂಗೇರಿ, ಉಡುಪಿ, ಕುಕ್ಕೆ ಸುಬ್ರಹ್ಮಣ್ಯ ಮತ್ತಿತರ ಕಡೆಗಳಿಗೆ ಈ ಬಸ್ ಗಳ ಸಂಚಾರವಿರಲಿದೆ.
ಮಧುರೈ, ಕೊಡೈಕನಾಲ್, ಊಟಿ, ತಾಂಜವೂರು, ವಿಜಯವಾಡ, ಹೈದ್ರಾಬಾದ್, ನೆಲ್ಲೂರು, ಶಿರಡಿ, ಪಣಜಿ, ಪುದುಚೇರಿ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾ ಮತ್ತಿತರ ಕಡೆಗಳಲ್ಲಿ ಈ ಬಸ್ ಗಳ ಸಂಚಾರ ಹೆಚ್ಚಾಗಿ ಇರಲಿದೆ.
ಈಸ್ಟರ್, ವಿಷು ಹಬ್ಬದ ಹಿನ್ನೆಲೆಯಲ್ಲಿ ಕಣ್ಣೂರು, ತಿರುವನಂತಪುರಂ, ಪಾಲಕ್ಕಡ್, ಎರ್ನಾಕುಲಂ, ಕಾಸರಗೋಡು ಮತ್ತು ಕೊಟ್ಟಾಯಂ ನಿಂದ ವಿಶೇಷ ಬಸ್ ಗಳು ಇರಲಿವೆ. ಇಲ್ಲದೇ, ಬೇರೆ ಊರುಗಳಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಇರಲಿದೆ. ಪ್ರಯಾಣಿಕರು ಆನ್ ಲೈನ್ ಮೂಲಕ www.ksrtc.karnataka.gov.in ಮತ್ತು ಮುಂಗಡ ಕಾಯ್ದಿರಿಸುವಿಕೆ ಕೌಂಟರ್ ಗಳ ಮೂಲಕ ಟಿಕೆಟ್ ಕಾಯ್ದಿರಿಸಬಹುದು.