ನೀವೆಷ್ಟು ಆರೋಗ್ಯವಂತರು,ಇಲ್ಲಿ ಚೆಕ್ ಮಾಡ್ಕೊಳ್ಳಿ | ದೇಹಾರೋಗ್ಯದ ಮಾಹಿತಿ ನೀಡುವ ಹೆಲ್ತ್ ಇಂಡೆಕ್ಸ್ BMI ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ ನೋಡಿ
ತೂಕದ ಸ್ಕೇಲ್ ನ ಮೇಲೆ ಪಾದಾರ್ಪಣೆ ಮಾಡುವುದರಿಂದ ಮಾತ್ರ ನೀವು ನಿಮ್ಮ ದೇಹದ ಆರೋಗ್ಯವಂತ ತೂಕವನ್ನು ಪತ್ತೆ ಮಾಡಿಕೊಳ್ಳಲು ಸಾಧ್ಯ ಅಂದುಕೊಳ್ಳಬೇಡಿ. ನಮ್ಮ ತೂಕ ನೋಡಿ, ” ನೋಡಿ, ಹತ್ತು ವರ್ಷದಿಂದ ಹೀಗೇನೆ ಮೈನ್ಟೈನ್ ಮಾಡಿದ್ದೀನಿ” ಎಂದು ತನ್ನನ್ನು ಹೊಗಳಿಕೊಳ್ಳುತ್ತ ತನ್ನ ತೂಕದ ಮೇಲೆ ಹೆಮ್ಮೆ ಪಡುವ ಮೊದಲು, ಈ ಲೇಖನ ಓದಿ.
ಮನುಷ್ಯನ ಆರೋಗ್ಯವನ್ನು ಸಿಂಪಲ್ಲಾಗಿ ಅಳತೆ ಮಾಡಲು ಇನ್ನೊಂದು ವಿಧಾನ ಇದೆ. ಅದುವೇ ಬಾಡಿ ಮಾಸ್ ಇಂಡೆಕ್ಸ್. ಅಂದರೆ ಕ್ಲುಪ್ತವಾಗಿ, BMI. ಇದು ದೇಹದ ಸಾಮಾನ್ಯ ಆರೋಗ್ಯದ ಅಳತೆ ಮಾತ್ರವಲ್ಲ ಮುಂದಿನ ಸಂಭವನೀಯ ಅನಾರೋಗ್ಯದ ದಿಕ್ಸೂಚಿ ಕೂಡಾ !
ನಿಮ್ಮ ದೇಹದ ಎತ್ತರಕ್ಕೆ ಅನುಗುಣವಾಗಿ ನಿಮ್ಮ ತೂಕ ಇದೆಯಾ ಅಂತ ತಿಳಿದುಕೊಳ್ಳುವುದು, ನಿಮ್ಮ ಈಗಿನ ದೇಹಾರೋಗ್ಯದ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವುದು ಮಾತ್ರವಲ್ಲದೆ, ಮುಂದಿನ ನಿಮ್ಮ ಆರೋಗ್ಯವಂತ ದೇಹ ಪ್ರಕೃತಿಗಾಗಿ ನೀವು ಮಾಡಿಕೊಳ್ಳಬೇಕಾದ ಮಾರ್ಪಾಡುಗಳನ್ನು ಈಗಿನಿಂದಲೇ ಆರಂಭಿಸಲು BMI ಸಹಾಯ ಮಾಡುತ್ತದೆ. ತೂಕ ಸಂಬಂಧಿತ ಕಾಯಿಲೆಗಳನ್ನು ಡಯಾಬಿಟಿಸ್ ಬ್ಲಡ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ನಿಮ್ಮನ್ನು ರಕ್ಷಿಸಿಕೊಳ್ಳಲು ಸಹಾಯಮಾಡಬಲ್ಲದು, ಈ bmi.
ವರ್ಲ್ಡ್ ಹೆಲ್ತ್ ಆರ್ಗನೈಜೇಷನ್ WHO ಪ್ರಕಾರ 25 ಕ್ಕಿಂತ ಹೆಚ್ಚು ಅಥವಾ ಹೆಚ್ಚಿನ BMI ಅನ್ನು ಅಧಿಕ ತೂಕ ಎಂದು ಪರಿಗಣಿಸಲಾಗುತ್ತದೆ ಮತ್ತು 30 ಅಥವಾ ಹೆಚ್ಚಿನದನ್ನು ಬೊಜ್ಜು ಎಂದು ಪರಿಗಣಿಸಲಾಗುತ್ತದೆ.
ಅಷ್ಟೇ ಅಲ್ಲ,18.5 ಕ್ಕಿಂತ ಕಡಿಮೆ ಇರುವ ವಯಸ್ಕ BMI ಅನ್ನು ಕಡಿಮೆ ತೂಕ ಎಂದು ಪರಿಗಣಿಸಲಾಗುತ್ತದೆ. ಕಡಿಮೆ BMI ಇರುವಿಕೆ ಅಪೌಷ್ಟಿಕತೆ, ತಿನ್ನುವ ಅಸ್ವಸ್ಥತೆ ( ಈಟ್ ರಿಲೇಟೆಡ್ ಡಿಸಾರ್ಡರ್) ಅಥವಾ ಇತರ ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತದೆ. ಈಗಾಗಲೇ ತಿಳಿಸಿದಂತೆ ಹೆಚ್ಚಿನ ಬಿಎಂಐ ಹೊಂದಿದವರು ಕೊರೋನರಿ ಡಿಸೀಸ್ ಗೆ ಕೂಡಾ ತುತ್ತಾಗುವ ಸಂಭವ ಹೆಚ್ಚು.

ತತ್ವದ ಜೊತೆಗೆ, ಅಂತರರಾಷ್ಟ್ರೀಯ WHO BMI ಕಟ್-ಆಫ್ ಪಾಯಿಂಟ್‌ಗಳು (16, 17, 18.5, 25, 30, 35 ಮತ್ತು 40) ಎಂದು ಗುರುತಿಸಲಾಗಿದೆ.
BMI ನ ಮೂಲ ಸ್ಲಾಬ್ ಗಳು ಇಂತಿವೆ.
ಕಡಿಮೆ ತೂಕ (ತೀವ್ರ ತೆಳ್ಳಗೆ) : 16.0
ಕಡಿಮೆ ತೂಕ (ಮಧ್ಯಮ ತೆಳ್ಳಗೆ): 16.0 – 16.9
ಕಡಿಮೆ ತೂಕ (ಸೌಮ್ಯ ತೆಳ್ಳಗೆ):17.0 – 18.4
ಸಾಮಾನ್ಯ ಶ್ರೇಣಿ: 18.5 – 24.9
ಅಧಿಕ ತೂಕ (ಪೂರ್ವ ಬೊಜ್ಜು): 25.0 – 29.9
ಬೊಜ್ಜು (ವರ್ಗ I): 30.0 – 34.9
ಬೊಜ್ಜು (ವರ್ಗ II): 35.0 – 39.9
ಬೊಜ್ಜು (ವರ್ಗ III)≥ 40.0
BMI ಅನ್ನು ಲೆಕ್ಕ ಮಾಡುವುದು ಸುಲಭ. ಹೆಚ್ಚಿನ ಮಾಹಿತಿ ಜಾಲತಾಣದಲ್ಲಿ ಸುಲಭವಾಗಿ ಸಿಗುತ್ತದೆ. ಆಸಕ್ತರು ಓದಿಕೊಳ್ಳಬಹುದು.