ವೇಶ್ಯಾಗೃಹದ ದಾಳಿ ಸಂದರ್ಭದಲ್ಲಿ ಸಿಕ್ಕಿಬಿದ್ದ ಗ್ರಾಹಕನನ್ನು ಬಂಧಿಸುವಂತಿಲ್ಲ ; ಕರ್ನಾಟಕ ಹೈಕೋರ್ಟ್ ಆದೇಶ

ಬೆಂಗಳೂರು : ವೇಶ್ಯಾವಾಟಿಕೆ ನಡೆಯುವ ಸ್ಥಳದಲ್ಲಿ ಪತ್ತೆಯಾದ ಗ್ರಾಹಕನ ವಿರುದ್ಧ ಮಾನವ ಕಳ್ಳಸಾಗಣೆ ತಡೆ ಕಾಯ್ದೆಯಡಿ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ವೇಶ್ಯಾಗೃಹದಲ್ಲಿ ಗ್ರಾಹಕರು. ಈ ವ್ಯಕ್ತಿ ವೇಶ್ಯಾಗೃಹಕ್ಕೆ ಹೋದಾಗಲೇ ಅಲ್ಲಿ ದಾಳಿ ನಡೆದಿತ್ತು. ಹೀಗಾಗಿ, ಆತನನ್ನು ಕೂಡ ಬಂಧಿಸಿ, ಆತನ ವಿರುದ್ಧ ಸೆಕ್ಷನ್ 3 (ವೇಶ್ಯಾಗೃಹ ಇರಿಸುವ ಶಿಕ್ಷೆ ಅಥವಾ ಆವರಣವನ್ನು
ವೇಶ್ಯಾವಾಟಿಕೆಯಾಗಿ ಬಳಸಲು ಅನುಮತಿ), ಐಪಿಸಿ ಸೆಕ್ಷನ್ 4 (ವೇಶ್ಯಾವಾಟಿಕೆಯ ಗಳಿಕೆಯ ಮೇಲೆ ಜೀವನ), ಸೆಕ್ಷನ್ 5 (ವೇಶ್ಯಾವಾಟಿಕೆಗಾಗಿ ವ್ಯಕ್ತಿಯನ್ನು ಪ್ರೇರೇಪಿಸುವುದು ಅಥವಾ ಕರೆದೊಯ್ಯುವುದು) ಮತ್ತು ಅನೈತಿಕ ಸಂಚಾರ ತಡೆ ಕಾಯ್ದೆ (ITPA) ಮತ್ತು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 370 (ವ್ಯಕ್ತಿಗಳ ಕಳ್ಳಸಾಗಣೆ) ಸೆಕ್ಷನ್ 6 (ವೇಶ್ಯಾವಾಟಿಕೆ ನಡೆಸುವ ಆವರಣದಲ್ಲಿ ವ್ಯಕ್ತಿಯನ್ನು ಬಂಧಿಸುವುದು) ಕೇಸ್ ದಾಖಲಿಸಲಾಗಿತ್ತು.

ಹೈಕೋರ್ಟ್ ನ್ಯಾಯಪೀಠ, ಆರೋಪಿ ತಾನು ಹೋಗಿ ವೇಶ್ಯಾವಾಟಿಕೆಗೆ ಕುಮ್ಮಕ್ಕು ನೀಡಿದಂತಾದರೂ ಶಿಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಆರೋಪಿ ಸಲ್ಲಿಸಿದ ಮನವಿ ಪುರಸ್ಕರಿಸಿರುವ ನ್ಯಾಯಾಲಯ ಅವರ ಮೇಲಿದ್ದ ಪ್ರಕರಣ ವಜಾ ಮಾಡಿದೆ.

Leave A Reply

Your email address will not be published.