ಧರ್ಮ ದಂಗಲ್ ಕುರಿತು ಭಕ್ತನು ಬೇಡಿಕೊಂಡ ರೀತಿ ವಿಚಿತ್ರ

0 10

ಧರ್ಮ ದಂಗಲ್ ಅವನತಿಯಾಗಲಿ, ಶಾಂತಿ, ಸ್ನೇಹದ ಸಹಭಾಳ್ವೆ ಮೂಡಲಿ ಎಂಬುದಾಗಿ ಬಾಳೆಹಣ್ಣಿನ ಮೇಲೆ ಭಕ್ತನೊಬ್ಬರು ಬರೆದಿದ್ದಾರೆ. ‌ಹುಬ್ಬಳ್ಳಿಯ ಶ್ರೀ ಗುರು ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವದಲ್ಲಿ ಈ ಘಟನೆ ನಡೆದಿದೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕೊಟಗೊಂಡ ಹುಣಸಿಯ ಸುಪ್ರಸಿದ್ಧ ಜಾತ್ರೆಯಾದಂತ ಶ್ರೀ ಗುರು ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿಗಳ ಜಾತ್ರೋತ್ಸವ ಕೆಲ ದಿನಗಳ ಹಿಂದೆ ನಡೆಯಿತು. ಈ ಜಾತ್ರೆಯಲ್ಲಿ ಭಾಗಿಯಾಗಿದ್ದಂತ ಭಕ್ತರೊಬ್ಬರು, ರಾಜ್ಯದಲ್ಲಿ ನಡೆಯುತ್ತಿರುವ ಧರ್ಮದ ದಂಗಲ್ ಅವನತಿ ಆಗಲಿ ಮತ್ತು ಸಮಾಜ ಶಾತಿ, ಸುವ್ಯವಸ್ಥೆ, ಸ್ನೇಹ ಸಂಬಂಧದಿಂದ ಕೂಡಿರುವಂತೆ ಮಾಡು ದೇವರೆ ಎಂದು ಬೇಡಿಕೊಂಡು ಬಾಳೆಹಣ್ಣನ್ನು ರಥದ ಮೇಲೆ ಎಸೆದಿದ್ದಾರೆ.

ಹೀಗೆ ಎಸೆದಂತ ಬಾಳೆಹಣ್ಣು ರಥಕ್ಕೂ ತಾಗಿದ್ದು, ತಾನು ಬೇಡಿದಂತ ಬಯಕೆ ಈಡೇರಲಿದೆ ಎಂದು ನಿರಾಳರಾಗಿದ್ದಾರೆ.

Leave A Reply