ಬೆಳ್ತಂಗಡಿ: ಹಾಡ ಹಗಲೇ ಮನೆಗೆ ನುಗ್ಗಿದ ಕಳ್ಳರು, ನಗ-ನಗದು ದೋಚಿ ಪರಾರಿ

Share the Article

ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು, ನಗ-ನಗದು ದೋಚಿದ ಘಟನೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕುತ್ರೊಟ್ಟು ಎಂಬಲ್ಲಿ ನಡೆದಿದೆ.

ಕುತ್ರೊಟ್ಟು ನಿವಾಸಿ ತಿಮ್ಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.

ತಿಮ್ಮಪ್ಪ ಪೂಜಾರಿ ಹಾಗೂ ಅವರ ಮಕ್ಕಳು ಬೆಳಗ್ಗೆ ಕೆಲಸಕ್ಕೆ ಹೋದ ಬಳಿಕ ಅವರ ಪತ್ನಿ ಬೆಳಿಗ್ಗೆ 10:30ರ ವೇಳೆಗೆ ಬೆಳ್ತಂಗಡಿಗೆ ತೆರಳಿದ್ದಾರೆ. ಮಧ್ಯಾಹ್ನ 1 ರ ವೇಳೆಗೆ ಮನೆಗೆ ಬಂದು ಎದುರಿನ ಬೀಗ ತೆಗೆಯಲು ನೋಡಿದಾಗ ತೆಗೆಯಲು ಸಾಧ್ಯವಾಗಿಲ್ಲ. ಕೂಡಲೇ ಪಕ್ಕದವರ ಮನೆಯವರ ಸಹಾಯದಿಂದ ಮನೆ ಒಳಗೆ ಹೋಗಿ ನೋಡಿದಾಗ ಹಂಚು ತೆಗೆದು ಕಳ್ಳರು ಒಳ ನುಗ್ಗಿರುವುದು ಗೊತ್ತಾಗಿದೆ. ಬಳಿಕ ಕೋಣೆಯಲ್ಲಿದ್ದ ಕಪಾಟನ್ನು ಪರಿಶೀಲಿಸಿದಾಗ ಅದರಲ್ಲಿದ್ದ ಸುಮಾರು ಒಟ್ಟು 17.240 ಗ್ರಾಂ ತೂಕದ ಚಿನ್ನಾಭರಣವನ್ನು ಕಳ್ಳರು ಕದ್ದಿರುವುದು ಗೊತ್ತಾಗಿದೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮನೆಯವರು ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply