ನೀವೂ ಕೂಡ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸ ಹೊಂದಿದ್ದೀರಾ ??! | ಹಾಗಿದ್ರೆ ಇದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಇಂದೇ ತಿಳಿದುಕೊಳ್ಳಿ
ಹೆಚ್ಚಿನ ಜನರನ್ನು ನೀವು ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂದಿರುವುದನ್ನು ನೋಡಿರಬಹುದು, ಅಥವಾ ನೀವೂ ಕೂಡ ಅಂತವರಲ್ಲಿ ಒಬ್ಬರಾಗಿರಬಹುದು. ಈ ಅಭ್ಯಾಸ ಮಾಮೂಲ್ ಆಗಿ ಬಿಟ್ಟಿದೆ. ಕೆಲವೊಂದಷ್ಟು ಜನ ಗತ್ತಿನಿಂದ ಆ ರೀತಿ ಕೂತರೆ, ಇನ್ನೂ ಕೆಲವೊಂದಿಷ್ಟು ಜನಕ್ಕೆ ಆ ರೀತಿ ಕೂರೋದೇ ಚಾಳಿಯಾಗಿ ಬಿಟ್ಟಿದೆ.
ಆದರೆ ಈ ಸಾಮಾನ್ಯವಾಗಿಬಿಟ್ಟ ಅಭ್ಯಾಸದಿಂದ ನಿಮ್ಮ ಆರೋಗ್ಯದ ಮೇಲೆ ಪೆಟ್ಟು ಬೀಳಬಹುದು. ಎಚ್ಚರ!!ಹೌದು.ಈ ರೀತಿ ಮಾಡೋದು ಆರೋಗ್ಯಕ್ಕೆ ಎಷ್ಟು ಹಾನಿಕರ ಗೊತ್ತಾ..? ಅಧ್ಯಯನವೊಂದರ ವರದಿಯ ಪ್ರಕಾರ ಮನುಷ್ಯ ತನ್ನ ಎಡಗಾಲಿನ ಮೇಲೆ ಬಲಗಾಲು ಹಾಕಿ ಕುಳಿತರೆ ಏನೆಲ್ಲಾ ದುಷ್ಪರಿಣಾಮ ಬೀಳುತ್ತದೆಯೆಂದು ತಿಳಿಸಿದೆ.
ಈ ಅಭ್ಯಾಸ ಹೊಂದಿರುವವರಿಗೆ ರಕ್ತ ಸಂಚಾರ ಸರಾಗವಾಗಿ ನಡೆಯಲ್ಲ. ರಕ್ತದೊತ್ತಡ ಹೆಚ್ಚಾಗಿ ಹೃದಯಾಘಾತ ಸಂಭವಿಸುವ ಲಕ್ಷಣಗಳು ಕಂಡು ಬರಬಹುದು. ಈ ರೀತಿ ಕುಳಿತುಕೊಳ್ಳುವುದರಿಂದ ಸೊಂಟದ ಸ್ನಾಯು ಸಮಸ್ಯೆ ಹೆಚ್ಚಾಗುತ್ತೆ. ಸ್ನಾಯುಗಳು ಒಂದು ಭಾಗ ಸಂಕಿಚಿತಗೊಂಡಿದ್ದರೆ ಇನ್ನೊಂದು ಕಡೆ ವಿಕಾಸನಗೊಂಡಿರತ್ತೆ. ಹೀಗಾಗಿ ಸ್ನಾಯು ಸಮಸ್ಯೆ, ನರ ದೌರ್ಬಲ್ಯ ಬರಬಹುದು. ಒಂದು ಕಡೆ ಹೆಚ್ಚು ವಾಲಿದಂತಹ ಅನುಭವವಾಗುವುದರಿಂದ ನರ ದೌರ್ಬಲ್ಯ ಉಂಟಾಗುತ್ತದೆ. ವಯಸ್ಸಾದ ನಂತ್ರ ಪಾಶ್ವವಾಯು, ಲಕ್ವದಂತಹ ಖಾಯಿಲೆ ಬರಬಹುದು. ಸಾಮಾನ್ಯವಾಗಿ ಈ ಅಭ್ಯಾಸ ಇದ್ದವರಿಗೆ ಭುಜ ಮತ್ತು ಕಾಲು ಹಾಗೂ ತೊಂಡೆಯ ಸಂದು ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಸೊಂಟದ ಎಲುಬುಗಳಲ್ಲಿ ತೀವ್ರವಾದ ನೋವು ಕಾಣಿಸತೊಡಗುತ್ತದೆ.
ನೋಡಿ ಇಷ್ಟೆಲ್ಲಾ ಪರಿಣಾಮ ಬೀರೋ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸ ನಿಮ್ಮಲ್ಲಿದ್ದರೆ ಅದನ್ನು ಆದಷ್ಟು ಬೇಗ ಬಿಡಿ. ಯಾಕಂದರೆ ಈ ಅಭ್ಯಾಸದಿಂದ ನಿಮ್ಮ ಹೃದಯಕ್ಕೆ ನೇರ ಎಫೆಕ್ಟ್ ಬೀಳಬಹುದಲ್ಲದೆ, ನಿಮ್ಮ ಜೀವನಕ್ಕೂ ತೊಂದರೆಯಾಗಬಹುದು ಜಾಗ್ರತೆ!.