ಬಲಿಪ ಪ್ರರಂಪರೆಯ ಕೊಂಡಿ, ಕಟೀಲು ಮೇಳದ ಭಾಗವತ ಪ್ರಸಾದ್ ಬಲಿಪ ವಿಧಿವಶ!! ಅಪಾರ ಅಭಿಮಾನಿಗಳ ಸಂತಾಪ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನದ ಎರಡನೇ ಮೇಳದಲ್ಲಿ ಭಾಗವತರಾಗಿದ್ದ ಬಲಿಪ ಪರಂಪರೆಯ ಕೊಂಡಿ ಪ್ರಸಾದ್ ಬಲಿಪ ಸೋಮವಾರ ನಿಧನರಾದರು.

ಸುಮಾರು 17 ರ ವಯಸ್ಸಿನಲ್ಲೇ ಭಾಗವತರಾಗಿ ಕಟೀಲು ಎರಡನೇ ಮೇಳದಲ್ಲಿ ಪ್ರಧಾನ ಭಾಗವತರಾಗಿ ಗುರುತಿಸಿಕೊಂಡಿದ್ದ ಪ್ರಸಾದ ಬಲಿಪರು,ಗಂಟಲು ಕ್ಯಾನ್ಸರ್ ನಿಂದಾಗಿ ಕಳೆದ ಕೆಲ ಸಮಯಗಳಿಂದ ತಿರುಗಾಟದಲ್ಲಿ ಭಾಗವಹಿಸಲು ಅಸಾಧ್ಯವಾಗಿತ್ತು.


Ad Widget

Ad Widget

Ad Widget

ಮೂಡುಬಿದಿರೆ ಮಾರೂರಿನ ನೂಯಿ ಎಂಬಲ್ಲಿ ಜನಿಸಿದ್ದ ಪ್ರಸಾದ್ ಬಲಿಪರಿಗೆ ಅವರ ತಂದೆ ಬಲಿಪ ನಾರಾಯಣ ಭಟ್ ಗುರುಗಳಾಗಿದ್ದರು. ಬಲಿಪ ಶೈಲಿಯ ಭಾಗವತಿಕೆಯನ್ನು ಮುಂದುವರಿಸಿಕೊಂಡು ಬಂದಿದ್ದ ಬಲಿಪ ಪರಂಪರೆಯ ಕೊಂಡಿ ವಿಧಿವಶರಾದ ಸುದ್ದಿ ತಿಳಿದು ಅಪಾರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Leave a Reply

error: Content is protected !!
Scroll to Top
%d bloggers like this: