ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಹೆಚ್‍ಐವಿ ಸೋಂಕಿತ ಅತ್ತೆ !!

ಹೆಚ್‍ಐವಿ ಸೋಂಕಿತ ಮಹಿಳೆಯೊಬ್ಬಳು ತನ್ನ ಸ್ವಂತ ಸೋದರಳಿಯನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ನಡೆದಿದೆ.

ಸೋದರಳಿಯನ ತಂದೆ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವಳು ನನ್ನ ಮಗನ ಜೊತೆ ಬಲವಂತವಾಗಿ ದೈಹಿಕ ಸಂಬಂಧವನ್ನು ಬೆಳೆಸಿದ್ದಾಳೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಬಲವಂತದ ಸುಳ್ಳು ಕೇಸು ಹಾಕಿ ಮಾನಹಾನಿ ಮಾಡುವುದಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ಮಹಿಳೆ ಪಿಲಿಭಿತ್‍ನಲ್ಲಿ ವಾಸಿಸುತ್ತಿದ್ದಳು. ಹೋಳಿ ಹಬ್ಬದ ವೇಳೆ ಕುಟುಂಬ ಸಮೇತ ತಮ್ಮ ಊರಿಗೆ ಬಂದಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿಕೊಂಡು ನನ್ನ ಮಗನ ಮೇಲೆ ಮೊದಲ ಬಾರಿ ದೌಜನ್ಯ ಎಸಗಿದ್ದಾಳೆ ಎಂದು ಸಂತ್ರಸ್ತನ ತಂದೆ ಹೇಳಿದ್ದಾರೆ. ನನ್ನ ಒಪ್ಪಿಗೆಯಿಲ್ಲದೆ ಅತ್ತೆ ನನ್ನ ಜೊತೆ ಇದನ್ನೆಲ್ಲಾ ಮಾಡಿದ್ದಾಳೆ ಎಂದು ಬಾಲಕ ಕೂಡ ಹೇಳಿದ್ದಾನೆ.

ತಂದೆಯ ಪ್ರಕಾರ, ಆರೋಪಿ ಮಹಿಳೆ ಈ ಹಿಂದೆ ರುದ್ರಪುರಕ್ಕೆ ಬಂದಿದ್ದಳು, ಅಲ್ಲಿಯೂ ಅವನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾಳೆ. ಈ ಹಿಂದೆ ಎಚ್‍ಐವಿ ಸೋಂಕಿನಿಂದಾಗಿ ಡಿಸೆಂಬರ್ ತಿಂಗಳಲ್ಲಿ ಬಾಲಕನ ಮಾವ ನಿಧನರಾಗಿದ್ದರು.

ಅತ್ತೆಗೆ ಮದುವೆಯಾಗಿ ಐದು ವರ್ಷವಾಗಿತ್ತು. ಮದುವೆಯಾಗಿ ಆರು ತಿಂಗಳಾದ ಮೇಲೆ ಆಕೆಯ ಆರೋಗ್ಯ ಹದಗೆಡತೊಡಗಿತ್ತು. ಆಗ ಆರೋಪಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದು, ಈ ವೇಳೆ ಅವಳಿಗೆ ಎಚ್‍ಐವಿ ಸೋಂಕು ತಗುಲಿರುವುದು ಕಂಡು ಬಂದಿತ್ತು. ಇದಾದ ಬಳಿಕ ಅವಳ ಪತಿಯನ್ನೂ ಸಹ ತಪಾಸಣೆಗೊಳಪಡಿಸಿದ್ದು, ಅವನಿಗೂ ಹೆಚ್‍ಐವಿ ಸೋಂಕು ತಗುಲಿದ್ದು, ದಂಪತಿಗಳಿಬ್ಬರಿಗೂ ಹೆಚ್‍ಐವಿ ಇರುವುದು ಧೃಡವಾಗಿತ್ತು. ಕಳೆದ ವರ್ಷ ಅವಳ ಪತಿ ಕೂಡ ಹೆಚ್‍ಐವಿ ಸೋಂಕಿನಿಂದ ಮೃತಪಟ್ಟಿದ್ದರು. ದಂಪತಿ ಮಗುವಿನ ವೈದ್ಯಕೀಯ ವರದಿ ಮಾತ್ರ ನೆಗೆಟಿವ್ ಬಂದಿತ್ತು.

ಈಗಾಗಲೇ ಆರೋಪಿ ಮಹಿಳೆಯು ಹೆಚ್‍ಐವಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್‍ಐವಿ ಸೋಂಕು ಗಂಡನಿಂದ ಹೆಂಡತಿಗೆ ಹರಡಿದೆಯೋ ಅಥವಾ ಗಂಡನಿಂದ ಹೆಂಡತಿಗೆ ಹರಡಿದೆಯೋ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಅದೃಷ್ಟವಶಾತ್ ಹುಡುಗನ ಮೆಡಿಕಲ್ ರಿಪೋರ್ಟ್ ನೆಗೆಟಿವ್ ಬಂದಿದ್ದು, ಪೋಷಕರು ಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಒಂದು ತಿಂಗಳ ನಂತರ ಮತ್ತೆ ಪರೀಕ್ಷೆ ಮಾಡಿಸಬೇಕು ಎಂದು ವೈದ್ಯರು ಸೂಚಿಸಿರುವುದಾಗಿ ಅವರು ಪೋಷಕರು ಹೇಳಿದ್ದಾರೆ.

ಪೋಷಕರ ದೂರಿನ ಮೇರೆಗೆ ರುದ್ರಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಹಿಳೆ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.