2 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಮಾಡಿದ ದೊಡ್ಡಪ್ಪ ಜೈಲಿನಲ್ಲೇ ಆತ್ಮಹತ್ಯೆಗೆ ಶರಣು !!!

ಎರಡು ವರ್ಷದ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ಎಸಗಿ ಆ ಪುಟ್ಟ ಕಂದನನ್ನು ಕೊಂದು, ಬಂಧನಕ್ಕೊಳಗಾಗಿದ್ದ ವ್ಯಕ್ತಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲಿನಲ್ಲೇ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅತ್ತಿಬೆಲೆ ನೆರಳೂರಿನ ನಿವಾಸಿ ದೀಪು (31) ಮೃತ ವ್ಯಕ್ತಿ. ಮಾ.28ರಂದು ಪೋಕ್ಸೋ ಕಾಯ್ದೆಯಡಿ ದೀಪುನನ್ನು ಅತ್ತಿಬೆಲೆ ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಶನಿವಾರ ಮುಂಜಾನೆ 5.25ಕ್ಕೆ ಜೈಲಿನ ಸ್ನಾನದ ಕೋಣೆಗೆ ಹೋ ದೀಪು, ಬೆಡ್‌ಶೀಟ್‌ನಿಂದ ಅಲ್ಲಿನ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆ ತಿಂಗಳು 2 ವರ್ಷದ ಕಂದಮ್ಮನ ಮೇಲೆ ಕಾರಿನಲ್ಲೇ ಅತ್ಯಾಚಾರವೆಗಿದ್ದ. ತೀವ್ರ ರಕ್ತಸ್ರಾವವಾಗಿ ಮಗು ಮೃತಪಟ್ಟಿತ್ತು.


Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: