ಪಾಲ್ತಾಡಿ : ಗುಡ್ಡೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಪ್ರಕರಣ : ಸಾವಿನ ಸುತ್ತ ಅನುಮಾನ,ಕೊಲೆ ಶಂಕೆ

ಸವಣೂರು : ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು,ಇದೊಂದು ಕೊಲೆಯಾಗಿರುವ ಸಾಧ್ಯತೆ ಇದೆ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಪಾಲ್ತಾಡಿ ಗ್ರಾಮದ ಬೊಳಿಯಾಲ ನಿವಾಸಿ ಸೇಸಪ್ಪ ಪೂಜಾರಿ (76ವ.) ಎಂಬವರ ಮೃತದೇಹ ಪತ್ತೆಯಾಗಿದೆ.ಫೆ.5ರಿಂದ ನಾಪತ್ತೆಯಾಗಿದ್ದಾರೆಂದು ಹೇಳಲಾಗಿರುವ ಸೇಸಪ್ಪ ಪೂಜಾರಿಯವರ ಶವ ಪತ್ತೆಯಾಗಿದೆ.ಸಾವಿನಲ್ಲಿ ಸಂಶಯವಿರುವ ಹಿನ್ನೆಲೆಯಲ್ಲಿ ಸೇಸಪ್ಪ ಪೂಜಾರಿಯವರ ಪುತ್ರಿ ಶುಭವತಿ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


Ad Widget

Ad Widget

Ad Widget

ಸೇಸಪ್ಪ ಪೂಜಾರಿಯವರು ತನ್ನ ತಮ್ಮ ಬಾಲಕೃಷ್ಣ ಪೂಜಾರಿಯವರ ಮನೆಯಲ್ಲಿ ಮೂಳೆ ಮುರೀತಕ್ಕೋಳಗಾಗಿ ವಿಶ್ರಾಂತಿ ಚಿಕಿತ್ಸೆ ಯಲ್ಲಿದ್ದು, ಫೆ.5ರಿಂದ ನಾಪತ್ತೆಯಾಗಿದ್ದು,ಎ.8ರಂದು ಅಪರಾಹ್ನ 3:00 ಗಂಟೆಗೆ ಪಾಲ್ತಾಡಿ ಗ್ರಾಮದ ಬೋಳಿಯಾಲಾ ಎಂಬಲ್ಲಿ ಗೇರು ನಿಗಮಕ್ಕೆ ಸಂಬಂಧ ಪಟ್ಟ ಗುಡ್ಡ ಜಮೀನಲ್ಲಿ ಸೇಸಪ್ಪ ಪೂಜಾರಿ ಯವರ ಮೃತದೇಹವು ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಶೇಷಪ್ಪ ಪೂಜಾರಿ ಯವರು ನಡೆದಾಡಲು ಅಶಕ್ತರಾಗಿದ್ದು ಮನೆಯಿಂದ ದೂರದ ಗುಡ್ಡ ಪ್ರದೇಶಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ಅಥವಾ ಆಕಸ್ಮಿಕವಾಗಿ ಬಿದ್ದು ಮೃತಪಡುವ ಸಾಧ್ಯತೆ ಕಡಿಮೆ ಇದ್ದುದರಿಂದ ಆಸ್ತಿಗಾಗಿ ಸೇಸಪ್ಪ ಪೂಜಾರಿಯವರನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಫೆ.5ರಿಂದ ನಾಪತ್ತೆಯಾಗಿದ್ದರೂ ಪೊಲೀಸ್ ಇಲಾಖೆಗೆ ದೂರು ನೀಡದ ಹಿನ್ನಲೆಯಲ್ಲಿ ಬಲವಾದ ಸಂಶಯ ವ್ಯಕ್ತವಾಗಿದೆ.ಪೊಲೀಸ್ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆ ಬಯಲಾಗಲಿದೆ.

Leave a Reply

error: Content is protected !!
Scroll to Top
%d bloggers like this: