ಏಲಿಯನ್ ನಿಂದ ಗರ್ಭಿಣಿ ಆದ ಮಹಿಳೆ!!

ಪ್ರಪಂಚದಲ್ಲಿ ದಿನಕ್ಕೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಈ ಘಟನೆಯೊಂದು ಯಾರು ಕೂಡ ನಂಬಲಾಗದ ಸ್ಥಿತಿ ತಂದುಬಿಟ್ಟಿದೆ. ಅದೇನೆಂದರೆ ಅನ್ಯಗ್ರಹ ಜೀವಿಗಳು(ಏಲಿಯನ್) ಮನುಷ್ಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದು, ಮಹಿಳೆಯೊಬ್ಬಳು ಗರ್ಭಿಣಿಯಾಗಿದ್ದಾಳೆ ಎಂದು ಪೆಂಟಗನ್ ಆಘಾತಕಾರಿ ಹೇಳಿಕೆಗಳನ್ನು ನೀಡಿದೆ.

 

ಅನ್ಯಗ್ರಹ ಜೀವಿಗಳು ಭೂಮಿ ಮೇಲೆ ಓಡಾಡುತ್ತೆ ಎಂಬ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಿದೆ. ಆದರೆ ಇದರ ಬಗ್ಗೆ ಖಚಿತವಾಗಿ ಯಾವುದೇ ರೀತಿಯ ಸ್ಪಷ್ಟ ಚಿತ್ರಣವಿಲ್ಲ. ಆದರೆ ‘ದ ಸನ್ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ’ಯಿಂದ ಪಡೆದ ಪೆಂಟಗನ್ ದಾಖಲೆಗಳಲ್ಲಿ ಭಾರೀ ಮಾಹಿತಿಯೊಂದು ಸಿಕ್ಕಿದ್ದು, ವಿಶ್ವವೇ ಬೆಚ್ಚಿಬೀಳುವಂತೆ ಮಾಡಿದೆ. ಪೆಂಟಗನ್ ದಾಖಲೆಗಳ ಪ್ರಕಾರ, ಅನ್ಯಗ್ರಹ ಜೀವಿಗಳು ಮನುಷ್ಯರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದೆ. ಈ ಹಿನ್ನೆಲೆ ಮಹಿಳೆಯೊಬ್ಬಳು ಅನ್ಯಜೀವಿ ಸಂಪರ್ಕದಿಂದ ಗರ್ಭಿಣಿಯಾಗಿದ್ದಾಳೆ ಎಂದು ವರದಿ ಮಾಡಿದೆ.

ಯುಎಸ್ ಮೂಲದ ನಾಗರಿಕ ಸಂಶೋಧನಾ ಸಂಸ್ಥೆ MUFON ಈ ಕುರಿತು ವರದಿ ಮಾಡಿದ್ದು, ‘ಉಪಯುಕ್ತ ದತ್ತಾಂಶ’ ಸಂಗ್ರಹಿಸಿದೆ. ಮಾನವನ ಮೇಲೆ ಅನ್ಯಗ್ರಹ ಜೀವಿಗಳು ಜೈವಿಕ ಪರಿಣಾಮ ಮತ್ತು ಅವುಗಳ ಆವರ್ತನವನ್ನು ಸಂಸ್ಥೆ ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ, ಸಹಜ ಅಪಹರಣ, ಲೆಕ್ಕಕ್ಕೆ ಸಿಗದ ಗರ್ಭಧಾರಣೆ, ಲೈಂಗಿಕ ಮುಖಾಮುಖಿಗಳು, ಟೆಲಿಪತಿಯ ಅನುಭವ ಮತ್ತು ಗ್ರಹಿಸಿದ ಟೆಲಿಪೋರ್ಟೇಶನ್‍ನಂತಹ ವಿಚಿತ್ರ ಘಟನೆಗಳನ್ನು ತನಿಖಾ ವರದಿಯಲ್ಲಿ ಸೇರಿಸಲಾಗಿದೆ.

ಈ ಅಧ್ಯಯನವು ಅನ್ಯಗ್ರಹ ಜೀವಿಗಳು ಮತ್ತು ಮನುಷ್ಯನ ನಡುವೆ 5 ರೀತಿಯಲ್ಲಿ ಲೈಂಗಿಕ ಸಂಪರ್ಕವಾಗುತ್ತದೆ ಎಂದು ತಿಳಿಸಲಾಗಿದೆ. ಒಂದು ವೇಳೆ ಮನುಷ್ಯನು ಏಲಿಯನ್ ಸಂಪರ್ಕಕ್ಕೆ ಬಂದರೆ ಅವರು ಗಾಯಗೊಳ್ಳುವುದು, ವಿಕಿರಣ ಸುಟ್ಟುಗಾಯಗಳಿಂದ ಬಳಲುವುದು, ಮೆದುಳಿನ ಸಮಸ್ಯೆ ಮತ್ತು ನರ ಹಾನಿ ಸಮಸ್ಯೆಗಳಿಗೆ ಒಳಗಾಗುತ್ತಾರೆ ಎಂದು ಅಧ್ಯಯದಲ್ಲಿ ತಿಳಿಸಲಾಗಿದೆ.

Leave A Reply

Your email address will not be published.