ಮಾಸ್ಕ್ ಧಾರಣೆ ಬಗ್ಗೆ ತಜ್ಞರ ಅಭಿಪ್ರಾಯವೇನು ? ಇಲ್ಲಿದೆ ಓದಿ
ಕಳೆದ ಎರಡು ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ನಿಯಮವು ಜಾರಿಯಲ್ಲಿದ್ದು ಮೊದ ಮೊದಲು ಎಲ್ಲರಿಗೂ ಇದು ಉಸಿರುಗಟ್ಟಿಸುತ್ತಿತ್ತು. ರೂಢಿ ಇಲ್ಲದ ಜನ ಜೀವ ತಿನ್ನುವ ರೋಗಕ್ಕೆ ಹೆದರಿ ಮಾಸ್ಕ್ ಧರಿಸುತ್ತಿದ್ದರು ನಂತರ ಕೊರೊನಾ ಇಳಿಮುಖ ಆಗುತ್ತಿದ್ದಂತೆ ದಂಡಕ್ಕೆ ಹೆದರಿ ನಂತರ ಪೋಲಿಸರಿಗೆ ಹೆದರಿ ಮಾಸ್ಕ್ ಧರಿಸತೊಡಗಿದರು.
ಮೊದಲು ಸಂಪೂರ್ಣವಾಗಿ ಪೂರ್ಣರೀತಿಯಲ್ಲಿ ಮಾಸ್ಕ್ ತೊಡುವವರು ನಂತರ ಬರೀ ಮೂಗಿಗೆ ಅಥವಾ ಬರೀ ಬಾಯಿಗೆ ಹೀಗೆ ಅರ್ಥಮರ್ಧ ಮಾಸ್ಕ್ ಹಾಕತೊಡಗಿದರು. ಈ ಎಲ್ಲಾ ಬಗೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದ್ದವು.
ಈಗೀಗ ಮಾಸ್ಕ್ ಹಾಕುವವರ ಸಂಖ್ಯೆ ವಿರಳವಾಗಿದೆ. ವ್ಯಾಕ್ಸಿನ್ ಯಿಂದ ಹಾಗು ಕೊರೊನಾ ಹಾವಳಿ ಕಡಿಮೆ ಆದ ಕಾರಣ ಮಾಸ್ಕ್ ಹಲವರು ಉಪಯೋಗಿಸುತ್ತಿಲ್ಲ. ಈ ಬಗ್ಗೆ ಸರ್ಕಾರವು ನಿಯಮವನ್ನು ಸಡಿಲಿಸಿದೆ. ಮಾಸ್ಕ್ ಕುರಿತು ತಜ್ಞರು ಏನು ಹೇಳಿದ್ದಾರೆ ಗೊತ್ತೆ? ಇಲ್ಲಿದೆ ನೋಡಿ
ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ನಿಯಮವನ್ನು ಸಡಿಲಗೊಳಿಸಬಹುದು. ಈಗಾಗಲೇ, ಕೆಲವು ರಾಜ್ಯಗಳು ಈ ನಿರ್ಬಂಧವನ್ನು ಕೊನೆಗೊಳಿಸಿದೆ ಎಂದು ಹಲವು ತಜ್ಞರು ಹೇಳಿದ್ದಾರೆ. ಒಂದು ವೇಳೆ ಮತ್ತೊಂದು ಕೋವಿಡ್ ಅಲೆ ಬಂದರೆ, ಆಗ ಮತ್ತೊಮ್ಮೆ ಈ ನಿಯಮವನ್ನು ಜಾರಿಗೊಳಿಸಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ, ದೆಹಲಿ, ಮಹಾರಾಷ್ಟ್ರ, ಪಂಜಾಬ್ ಮತ್ತು ಹರಿಯಾಣದಲ್ಲಿ ಕಡ್ಡಾಯ ಮಾಸ್ಕ್ ಧರಿಸುವ ನಿಯಮವನ್ನು ರದ್ದುಗೊಳಿಸಿದೆ. ಕಡ್ಡಾಯ ಮಾಸ್ಕ್ ಧಾರಣೆ ನಿಯಮಕ್ಕಿಂತ ಜನರಿಗೆ ಬೂಸ್ಟರ್ ಡೋಸ್ ನೀಡುವ ಕಾರ್ಯದತ್ತ ಹೆಚ್ಚಿನ ಗಮನವಹಿಸಬೇಕು ಎಂದು ತಜ್ಞರು ಹೇಳಿದ್ದಾರೆ.