ಕ್ಲಾಸ್ ರೂಮ್ ನಲ್ಲೇ ಮದ್ಯ ಸೇವಿಸಿ ತೂರಾಡಿದ ವಿದ್ಯಾರ್ಥಿನಿಯರು !! | ಜ್ಯೂಸ್ ಗೆ ಮಿಕ್ಸ್ ಮಾಡಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದ ವೀಡಿಯೋ ವೈರಲ್

ಇತ್ತೀಚೆಗೆ ವಿದ್ಯಾರ್ಥಿನಿಯರು ಮದ್ಯ ಸೇವನೆಯಲ್ಲಿ ತೊಡಗಿರುವ ವೀಡಿಯೋಗಳು ಹರಿದಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಂತೆಯೇ ಇದೀಗ ಕೆಲ ಯುವತಿಯರು ಕಾಲೇಜಿನ ಕ್ಲಾಸ್ ರೂಮ್ ಒಳಗೆಯೇ ಮದ್ಯ ಸೇವನೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆಯ ಬೆನ್ನಲ್ಲೇ ಎಚ್ಚೆತ್ತ ಪ್ರಾಂಶುಪಾಲರು ಯುವತಿಯರನ್ನು ಕಾಲೇಜಿನಿಂದ ಅಮಾನತು ಮಾಡಿದ ಘಟನೆ ನಡೆದಿದೆ.

ತಮಿಳುನಾಡಿನ ಕಾಂಚಿಪುರದ ಎನಾಥರಿನ ಕಲಾ ಮತ್ತು ವಿಜ್ಞಾನ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿರುವ ವೀಡಿಯೋದಲ್ಲಿ 10ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನ ಕ್ಲಾಸ್‌ರೂಮ್ ಒಳಗೆ ಒಂದು ಡೆಸ್ಕ್ ಮೇಲೆ ಕುಳಿತು, ತುಂಬಿದ ಜ್ಯೂಸ್ ಬಾಟಲ್ ಖಾಲಿ ಮಾಡಿ, ಮದ್ಯವನ್ನು ಖಾಲಿ ಜ್ಯೂಸ್ ಬಾಟಲ್‌ಗೆ ತುಂಬಿಕೊಂಡು ಅದಕ್ಕೆ ಜ್ಯೂಸ್ ಮಿಶ್ರಣ ಮಾಡಿ ತರಗತಿ ಒಳಗೆ ಮದ್ಯ ಸೇವಿಸುತ್ತಿರುವುದು ಸೆರೆಯಾಗಿದೆ.


Ad Widget

Ad Widget

Ad Widget

ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದು ಪ್ರಾಂಶುಪಾಲರ ಗಮನಕ್ಕೂ ಬಂದಿದೆ. ತಕ್ಷಣ ಯುವತಿಯರನ್ನು ಗುರುತಿಸಿದ ಪ್ರಾಂಶುಪಾಲರು ಅವರೆಲ್ಲರನ್ನು ಅಮಾನತು ಮಾಡಿದ್ದು, ತನಿಖೆಗೆ ಆದೇಶವನ್ನು ನೀಡಿದ್ದಾರೆ.

ವಿದ್ಯಾರ್ಥಿಗಳೆಲ್ಲರೂ ಪ್ರಥಮ ವರ್ಷದ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ತರಗತಿಯಲ್ಲಿ ತಮ್ಮೊಂದಿಗೆ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಮದ್ಯ ಖರೀದಿಸಿದ್ದ ಎಂದು ಅವರು ಹೇಳಿದ್ದಾರೆ. ಆಲ್ಕೋಹಾಲ್ ಎಂದು ತಿಳಿದ ನಂತರವೇ ಅದನ್ನು ಕುಡಿದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ವೇಳೆ ತೆಗೆದ ವೀಡಿಯೋ ಈಗ ಲೀಕ್ ಆಗಿದೆ ಎಂದು ತಿಳಿದುಬಂದಿದೆ.

ಎಲ್ಲಾ ವಿವರಣೆಗಳನ್ನು ಕೇಳಿದ ಪ್ರಾಂಶುಪಾಲರು, ಕಾಲೇಜಿನ ತರಗತಿಯಲ್ಲಿ ಮದ್ಯಪಾನ ಮಾಡಿದ 5 ವಿದ್ಯಾರ್ಥಿನಿಯರು ಮತ್ತು ಒಬ್ಬ ವಿದ್ಯಾರ್ಥಿಯನ್ನು ತಕ್ಷಣವೇ ಅಮಾನತುಗೊಳಿಸಿದ್ದಾರೆ. ಪ್ರಾಂಶುಪಾಲರು ವಿದ್ಯಾರ್ಥಿಗಳ ಪೋಷಕರನ್ನು ಕಾಲೇಜಿಗೆ ಕರೆಸಿಕೊಂಡು ಮುಂದೆ ಇಂತಹ ಘಟನೆ ನಡೆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕೆಲದಿನಗಳ ಹಿಂದೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಶಾಲಾ ವಿದ್ಯಾರ್ಥಿಗಳು ಮದ್ಯ ಸೇವಿಸುತ್ತಿರುವ ಇನ್ನೊಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹುಡುಗಿಯರು ಮತ್ತು ಹುಡುಗರ ಗುಂಪೊಂದು ಶಾಲಾ ಸಮವಸ್ತ್ರದಲ್ಲೇ ಬಸ್‌ನಲ್ಲಿ ಬಿಯರ್ ಸೇವಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿತ್ತು. ಆರಂಭದಲ್ಲಿ ಇದನ್ನು ಹಳೇ ವೀಡಿಯೋ ಎಂದು ನಂಬಲಾಗಿತ್ತು. ಆದರೆ, ಈ ಘಟನೆ ಇತ್ತೀಚೆಗ ನಡೆದಿರುವುದಾಗಿ ಬೆಳಕಿಗೆ ಬಂದಿತ್ತು.

Leave a Reply

error: Content is protected !!
Scroll to Top
%d bloggers like this: