ಭಯದಿಂದ ಜೀವ ಉಳಿಸಿಕೊಳ್ಳಲು ಹೊರಟವರ ಜೀವ ತೆಗೆದ ರಾಕೇಟ್ ದಾಳಿ ; ಹೆಚ್ಚಾದ ರಣರಂಗದ ಕಾವು
ಉಕ್ರೇನ್ ವಿರುದ್ಧದ ಯುದ್ಧದ ಪರಿಣಾಮ ಕದನರಂಗದಲ್ಲಿ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಪೂರ್ವ ಉಕ್ರೇನ್ ನಗರದ ಕ್ರಾಮಾಟೋರ್ಸ್ಕ್‌ನಲ್ಲಿರುವ ರೈಲು ನಿಲ್ದಾಣದ ಮೇಲೆ ಇಂದು ನಡೆದ ರಾಕೆಟ್ ದಾಳಿ ನಡೆದಿದೆ.
ನಾಗರಿಕರನ್ನು ಸ್ಥಳಾಂತರಿಸಲು ಬಳಸಲಾಗುತ್ತಿದ್ದ ಪೂರ್ವ ಉಕ್ರೇನ್ ನಗರದ ಕ್ರಾಮಾಟೋರ್ಸ್ಕ್‌ನಲ್ಲಿರುವ ರೈಲು ನಿಲ್ದಾಣದ ಮೇಲೆ ಇಂದು ನಡೆದ ರಾಕೆಟ್ ದಾಳಿಯಲ್ಲಿ ಐದು ಮಕ್ಕಳು ಸೇರಿದಂತೆ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ. 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಆದರೆ ರಷ್ಯಾ ತಾನು ದಾಳಿ ನಡೆಸಿರುವುದನ್ನು ನಿರಾಕರಿಸಿದೆ.ಇದುವರೆಗೂ ತಾನು ನಡೆಸಿದ ದಾಳಿಗಳು ಮತ್ತು ಸಾವಿನ ಸಂಖ್ಯೆ ಬಗ್ಗೆ ರಷ್ಯಾ ಯಾವುದೇ ಹೇಳಿಕೆ ನೀಡಿಲ್ಲ.
ರಷ್ಯಾದ ಎರಡು ರಾಕೆಟ್ಗಳು ಪೂರ್ವ ಉಕ್ರೇನ್ನ ಕ್ರಾಮಾಟೋರ್ಸ್ಕ್ನಲ್ಲಿರುವ ರೈಲು ನಿಲ್ದಾಣವನ್ನು ಹೊಡೆದುರುಳಿಸಿವೆ ಎಂದು ಉಕ್ರೇನ್ ಹೇಳಿದೆ. ನಿಲ್ದಾಣದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ತುಂಬಿಕೊಂಡಿದ್ದರು. ರಾಕೆಟ್ ದಾಳಿಯಿಂದ ಮೃತರಾದವರ ದೇಹಗಳು ಚೆಲ್ಲಾಪಿಲ್ಲಿಯಾಗಿ ಹರಡಿ ಬಿದ್ದ ದೃಶ್ಯ ಮನಕಲಕುವಂತಿದೆ. ಅವರ ಲಗೇಜುಗಳು ಎಲ್ಲೆಂದರಲ್ಲಿ ಬಿದ್ದಿವೆ.