ನಟಿ ರಶ್ಮಿಕಾ ಮಂದಣ್ಣ ಮದುವೆಯಾದರೆ ಡಿವೋರ್ಸ್ ಖಂಡಿತ : ಖ್ಯಾತ ಜ್ಯೋತಿಷಿಯ ನುಡಿ

0 21

ನಟಿ ರಶ್ಮಿಕಾ ಮಂದಣ್ಣ ವೈವಾಹಿಕ ಜೀವನದ ಬಗ್ಗೆ ಜ್ಯೋತಿಷಿಯೊಬ್ಬರು ಶಾಕಿಂಗ್ ವಿಷಯ ಹೇಳಿದ್ದು ಈಗ ಎಲ್ಲಾ ಕಡೆ ವೈರಲ್ ಆಗ್ತಿದೆ.

ರಶ್ಮಿಕಾ ಅವರ ವೈವಾಹಿಕ ಜೀವನ ಸುಖಮಯ ಆಗಿರುವುದಿಲ್ಲ. ಮದುವೆ ನಂತರ ಡಿವೋರ್ಸ್ ಕೂಡ ಆಗಬಹುದು ಎಂದು ಆಂಧ್ರದ ಖ್ಯಾತ ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಆ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ವೇಣು ಸ್ವಾಮಿ 2 ವರ್ಷಗಳ ಹಿಂದೆಯೇ ಸಮಂತಾ ನಾಗಚೈತನ್ಯ ಡಿವೋರ್ಸ್ ಬಗ್ಗೆ ಭವಿಷ್ಯ ನುಡಿದಿದ್ದರು. ಪ್ರಭಾಸ್, ನಯನತಾರಾ, ಅನುಷ್ಕಾ ಶೆಟ್ಟಿ, ರಶ್ಮಿಕಾ ಮಂದಣ್ಣ ವೈವಾಹಿಕ ಜೀವನ ಸುಖಮಯವಾಗಿರೋದಿಲ್ಲ ಅಂತ ಕೂಡ ಹೇಳಿದ್ದಾರೆ. ಈ ಹಿಂದೆ ಜ್ಯೋತಿಷಿ ವೇಣು ಸ್ವಾಮಿ ರಶ್ಮಿಕಾ ಅವರಿಂದ ತಾರಾ ದೇವಿ ಪೂಜೆ ಮಾಡಿಸಿದ್ದರು, ಆ ಪೂಜೆಯ ನಂತರ ರಶ್ಮಿಕಾಗೆ ಅದೃಷ್ಟ ಬಂತು, ಸಾಕಷ್ಟು ಅವಕಾಶ ಸಿಕ್ತು ಅಂತ ಜ್ಯೋತಿಷಿ ವೇಣು ಸ್ವಾಮಿ ಹೇಳಿಕೊಂಡಿದ್ದಾರೆ. ವೇಣು ಸ್ವಾಮಿ ಅವರಿಂದ ರಶ್ಮಿಕಾ ಪೂಜೆ ಮಾಡಿಸಿದ ಫೋಟೋ, ವೀಡಿಯೋ ವೈರಲ್ ಆಗಿತ್ತು.

Leave A Reply