ಪ್ರಿಯತಮೆಗಾಗಿ ಪರಿಚಯಸ್ಥರ ಮನೆಗೆ ನುಗ್ಗಿ ಕಳ್ಳತನ ,ಬಂಧನ

0 19

ಬೆಂಗಳೂರು: ಪ್ರಿಯತಮೆಯನ್ನು ಸಂತೃಪ್ತಿಗೊಳಿಸಲು ಹಾಗೂ ಶೋಕಿಗಾಗಿ ಪರಿಚಯಸ್ಥರ ಮನೆಯಲ್ಲಿಯೇ ಕಳವುಗೈಯುತ್ತಿದ್ದ ಆರೋಪಿಯನ್ನು ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಕೆ.ಪಿ.ಅಗ್ರಹಾರ ನಿವಾಸಿ ನವೀನ್ ಕುಮಾರ್ (22) ಬಂಧಿತ ಆರೋಪಿ. ಬಂಧಿತನಿಂದ 4.90 ಲಕ್ಷ ರೂ. ಮೌಲ್ಯದ 109 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಆರೋಪಿ ನವೀನ್ ಕುಮಾರ್ ಪರಿಚಯಸ್ಥ ಶಿವಶಂಕರಯ್ಯ ಎಂಬುವರ ಮನೆಯಲ್ಲಿ ಮಾರ್ಚ್ 28 ರಂದು ಕಳವು ಮಾಡಿದ್ದ. ಅಂದು ಶಿವಶಂಕರಯ್ಯರ ಪತ್ನಿ ನವೀನ್ ಮನೆಗೆ ಬಂದಿದ್ದರು. ಆಗ ಆಕೆ ನವೀನ್ ತಾಯಿಯೊಂದಿಗೆ ಮಾತನಾಡುತ್ತಾ ಮನೆಯಲ್ಲಿ ಯಾರು ಇಲ್ಲ ಬೀಗ ಹಾಕಿ ಬರುವುದನ್ನೂ ಮರೆತಿದ್ದೇನೆ ಎಂದು ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡ ನವೀನ್, ತಕ್ಷಣ ಶಿವಶಂಕರಯ್ಯ ಮನೆಗೆ ಹೋಗಿ ಮನೆಯ ಬೀರುವಿನಲ್ಲಿದ್ದ ಚಿನ್ನದ ಚೈನ್, ಕಿವಿಯೋಲೆ ಹಾಗೂ ಉಂಗುರ ಸೇರಿದಂತೆ 106 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ.

Leave A Reply