ನಮ್ಮ ಧರ್ಮ ದೇವರನ್ನು ನಂಬದವರ ಬಸ್ ಗಳಲ್ಲಿ ತೀರ್ಥಯಾತ್ರೆ ಬೇಡ- ಮುಸ್ಲಿಂ ಬಸ್ ಬ್ಯಾನ್ ಗೆ ಕರೆಕೊಟ್ಟ ಭಾರತ ರಕ್ಷಣಾ ವೇದಿಕೆ
ಬೆಂಗಳೂರು :ಹಿಜಾಬ್ ಸಂಘರ್ಷದಿಂದ ಶುರುವಾದ ಹಿಂದೂ-ಮುಸ್ಲಿಂ ಪೈಪೋಟಿ ಒಂದೊಂದೇ ವಿಷಯಕ್ಕೆ ಮೇಲೇಳುತ್ತಿದೆ. ಹಿಜಾಬ್ ತರಗತಿಗೆ ಬಹಿಷ್ಕಾರ ಹಾಕುವುದು, ದೇವಾಲಯಗಳ ಆವರಣದಲ್ಲಿ ಮುಸ್ಲಿಂ ಸಮುದಾಯಕ್ಕೆ ವ್ಯಾಪಾರ ನಿಷೇಧ, ಮಾಂಸಗಳಲ್ಲಿ ಹಲಾಲ್, ಜಟ್ಕಾ, ಮಾವಿನಕಾಯಿ ವ್ಯಾಪಾರ, ಹಿಂದವೀ ಸ್ಟೋರ್ಸ್ ಇಂತಹ ವಿವಾದದ ನಡುವೆ ಇದೀಗ ಮತ್ತೊಂದು ಧರ್ಮ ಸಂಘರ್ಷದ ಅಭಿಯಾನ ಶುರುವಾಗಿದೆ. ಧರ್ಮ ಭೇದ ಬಸ್ ಹತ್ತಿ ಕೂತಿದೆ. ತೀರ್ಥಯಾತ್ರೆಗೆ ಹೋಗುವಾಗ ಧರ್ಮ ನೋಡಿಕೊಂಡು ಬಸ್ ಹತ್ತಲು ಅಭಿಯಾನ ಶುರುವಾಗಿದೆ. ಈಗಾಗಲೇ ವ್ಯಾಪಾರ ವಹಿವಾಟುಗಳಲ್ಲಿ ತೀರಾ ಇಳಿಕೆ ಅನುಭವಿಸುತ್ತಿರುವ ಮುಸ್ಲಿಂ ಸಮುದಾಯದವರು ಆತಂಕಗೊಂಡಿದ್ದಾರೆ.
ಹೌದು. ಇದೀಗ ತೀರ್ಥಯಾತ್ರೆ ಹೋಗುವಾಗ ಮುಸ್ಲಿಂ ಬಸ್ ಗಳಲ್ಲಿ ಹೋಗದಂತೆ ಹಿಂದೂ ಸಂಘಟನೆಗಳು ಅಭಿಯಾನ ಆರಂಭಿಸಲು ನಿರ್ಧರಿಸಿವೆ.
‘ಮುಸ್ಲಿಮರ ಬಸ್ ಗಳಲ್ಲಿ ಹಿಂದೂಗಳು ತೀರ್ಥಯಾತ್ರೆಗೆ ಹೋಗಬೇಡಿ , ನಮ್ಮ ಧರ್ಮ ದೇವರನ್ನು ನಂಬದವರ ಬಸ್ ಗಳಲ್ಲಿ ಪ್ರಯಾಣ ಬೇಡ, ಹಿಂದೂಗಳ ಬಸ್ ಗಳಲ್ಲಿ ತೀರ್ಥಯಾತ್ರೆಗೆ ಹೋಗಿ’. ಸ್ವಧರ್ಮದವರ ಬಸ್ ನಲ್ಲಿ ತೆರಳಿ ಪುಣ್ಯ katkolli’ ಎಂಬಿತ್ಯಾದಿ ಹೇಳಿಕೆಗಳ ಮೂಲಕ ಅಭಿಯಾನ ಸಾಗಿದೆ. ಹೀಗೆ ಮುಸ್ಲಿಂ ಬಸ್ ಬ್ಯಾನ್ ಗೆ ಭಾರತ ರಕ್ಷಣಾ ವೇದಿಕೆ ಕರೆಕೊಟ್ಟಿದೆ.