ಹೆಲ್ಮೆಟ್ ಹಾಕಿ ಬೈಕ್ ಸವಾರಿ ಮಾಡಿದ ಬೆಕ್ಕು

ಮೊದಲು ಗಂಡು ಮಕ್ಕಳು ಬೈಕ್ ಓಡಿಸುತ್ತಿದ್ದರು, ಈಗ ಹೆಣ್ಣುಹುಡುಗಿಯರೂ ಸಕ್ಕತ್ ಆಗಿ ಬೈಕ್ ಓಡಿಸುತ್ತಾರೆ. ಆದರೆ ಈಗ ವಿಚಿತ್ರವೆಂಬಂತೆ ಇಲ್ಲೊಂದು ಬೆಕ್ಕು ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡಿದೆ. ನೀವು ಸರ್ಕಸ್ ನಲ್ಲಿ ಆನೆ ಸೈಕಲ್ ಓಡಿಸಿರುವುದು ನೋಡಿ ಮಜಬೂತು ಗೊಂಡಿರಬಹುದು ಆದರೆ ಇಲ್ಲಿ ಬೆಕ್ಕು ಬೈಕ್ ಸವಾರಿ ಮಾಡಿದೆ ಹೆಲ್ಮೆಟ್ ಧರಿಸಿ.!

 

ಮನುಷ್ಯರೇ ಹೆಲ್ಮೆಟ್ ಧರಿಸಿ ಗಾಡಿ ಓಡಿಸಿ , ಪ್ರಾಣ ಉಳಿಸಿಕೊಳ್ಳಿ ಎಂದು ಹೇಳುತ್ತುರುವ ಈ ಕಾಲದಲ್ಲಿ ಬೆಕ್ಕು ಹೆಲ್ಮೆಟ್ ಧರಿಸಿ ಮಾದರಿಯಾಗಿದೆ‌. ಬೆಕ್ಕು ತನ್ನ ಮಾಲಿಕನೊಂದಿಗೆ ಹೊರಗೆ ಹೋಗುವಾಗ ಪುಟ್ಟ ಹೆಲ್ಮೆಟ್ ಅನ್ನು ಧರಿಸಿ  ಬೈಕ್  ಸವಾರಿ ಮಾಡುವ ದೃಶ್ಯ ಗಾಡಿ ಮೇಲೆ ಮುಂದೆ ಕುಳಿತ ಮಕ್ಕಳು ನಾ ಹಾರ್ನ್ ಹಾಕತಿನಿ , ನಾ ಗಾಡಿ ಓಡಿಸುತ್ತೇನೆ ಎಂದು ಹಠ ಹಿಡಿಯುವ ಪ್ರಸಂಗ ನೆನಪಿಸುತ್ತದೆ.

ಹೆಲ್ಮೆಟ್ ಧರಿಸಿದ ಬೆಕ್ಕು ತನ್ನ ಮಾಲಿಕನೊಂದಿಗೆ ಬೈಕ್ ಸವಾರಿ ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಬೆಕ್ಕು  ಹೆಲ್ಮೆಟ್ ಧರಿಸಿ ಎಷ್ಟು ಹಾಯಾಗಿ ಕುಳಿತು ಎಲ್ಲೆಡೆ ವೀಕ್ಷಣೆ ಮಾಡುತ್ತಿರುವ ದೃಶ್ಯ ಮುದ್ದುಮುದ್ದಾಗಿದೆ.

https://www.instagram.com/reel/CbxtAs1F6GO/?utm_source=ig_web_copy_link

Leave A Reply

Your email address will not be published.