ಎಸಿ ಸ್ಫೋಟದಿಂದ ತಂದೆ-ತಾಯಿ ಸೇರಿದಂತೆ ಇಬ್ಬರು ಮಕ್ಕಳ ದುರಂತ ಅಂತ್ಯ|ಅದೇ ಮನೆಯಲ್ಲಿದ್ದ ಇನ್ನೊಂದು ದಂಪತಿ ಜೀವಾಪಾಯದಿಂದ ಪಾರು!

Share the Article

ವಿಜಯನಗರ:ವಿದ್ಯುತ್ ಶಾರ್ಟ್ ಸರ್ಕ್ಯೂಟ್​ ಮತ್ತು ಎಸಿ ಸ್ಫೋಟದಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಭಯಾನಕ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ.

ಮೃತರು ವೆಂಕಟ್ ಪ್ರಶಾಂತ್​ (42) ಪತ್ನಿ ಡಿ. ಚಂದ್ರಕಲಾ (38 ) ಹಾಗೂ ಮಕ್ಕಳಾದ ಎಚ್.ಎ. ಅರ್ದ್ವಿಕ್(16) ಮತ್ತು ಪ್ರೇರಣಾ (8).

ವಿದ್ಯುತ್ ಶಾರ್ಟ್ ಸರ್ಕ್ಯೂಟ್​ ಮತ್ತು ಎ.ಸಿ ಸ್ಫೋಟದಿಂದ ರಾಘವೇಂದ್ರ ಶೆಟ್ಟಿ ಎನ್ನುವವರ ಮನೆಗೆ ಬೆಂಕಿ ಹತ್ತಿಕೊಂಡು ದಟ್ಟ ಹೊಗೆ ಆವರಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ರಾಘವೇಂದ್ರ ಶೆಟ್ಟಿ ಮತ್ತು ಅವರ ಪತ್ನಿ ರಾಜಶ್ರೀ ಅವರು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.ಆದರೆ, ವೆಂಕಟ್​ ಪ್ರಶಾಂತ್​ ಮತ್ತು ಅವರ ಪತ್ನಿ ಮತ್ತು ಮಕ್ಕಳು ಹೊರಬರಲಾಗದೇ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಬೆಳಗಿನ ಜಾವ ಅವಘಡ ನಡೆದಿದ್ದು, . ಎಸಿ ಸ್ಫೋಟದಿಂದ ವಿಷ ಅನಿಲ ಸೋರಿಕೆಯೋ ಅಥವಾ ಬೆಂಕಿ ಹತ್ತಿಕೊಂಡ ಹೊಗೆಗೆ ಉಸಿರುಗಟ್ಟಿತೋ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಮೃತದೇಹಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು,ಅಗ್ನಿಶಾಮಕ ದಳ ಸಂಪೂರ್ಣ ಬೆಂಕಿ ನಂದಿಸಿ ಇಡೀ ಏರಿಯಾದ ಕರೆಂಟ್ ತೆಗೆದು ಅಗ್ನಿ ಅವಘಡ ಮತ್ತು ಶಾರ್ಟ್ ಸರ್ಕ್ಯೂಟ್​ಗೆ ಕಾರಣ ಹುಡುಕಲಾಗುತ್ತಿದೆ.ಈ ಘಟನೆ ಸಂಬಂಧ ಮರಿಯಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave A Reply