ಬರೋಬ್ಬರಿ 50 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇಲ್ಲದೆನೇ ಗಾಡಿ ಚಲಾಯಿಸಿದ 70 ರ ವೃದ್ಧ !

ವಾಹನ ಚಾಲನೆ ಮಾಡುವಾಗ ಪೊಲೀಸ್ ನವರು ತಡೆದರೇ ಮೊದಲು ಕೇಳುವುದೇ ಲೈಸೆನ್ಸ್. ಅದಿಲ್ಲ ಅಂದರೆ ನಿಮ್ಮನ್ನು ಎಂಕ್ವೈರಿ ಮಾಡುವುದು ಸಹಜ. ಆದರೆ ಇಲ್ಲೊಬ್ಬ ಬರೋಬ್ಬರಿ 50 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇಲ್ಲದೆನೇ ಗಾಡಿ ಚಲಾಯಿಸಿದ್ದು, ಒಂದು ಬಾರಿ ಕೂಡಾ ಸಿಕ್ಕಿಬೀಳದೇ ಇದ್ದುದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಏನಿದು ಸ್ಟೋರಿ ಬನ್ನಿ ತಿಳಿಯೋಣ!

ಬ್ರಿಟನ್ ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

70 ವರ್ಷದ ವ್ಯಕ್ತಿಯೊಬ್ಬ ಕಳೆದ 50 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುತ್ತಿದ್ದ. ಆದರೆ ಈ ಬಾರಿ ಗ್ರಹಚಾರ ಕೆಟ್ಟಿದ್ದರಿಂದ ನಾಟಿಂಗ್‌ಹ್ಯಾಮ್‌ಶೈರ್‌ನ ಬುಲ್‌ವೆಲ್‌ನಲ್ಲಿರುವ ಟೆಸ್ಕೋ ಎಕ್ಸ್‌ಟ್ರಾ ಸ್ಟೋರ್ ಬಳಿ ಪೊಲೀಸರು ಈ ವೃದ್ಧನನ್ನು ಸೆರೆಹಿಡಿದಿದ್ದಾರೆ.

ನಾಟಿಂಗ್‌ಹ್ಯಾಮ್‌ಶೈರ್ ಪೊಲೀಸರೇ ನೀಡಿರೋ ಮಾಹಿತಿ ಪ್ರಕಾರ ಈತ 12 ವರ್ಷದ ಬಾಲಕನಾಗಿದ್ದಾಗಿನಿಂದೇ ಡ್ರೈವಿಂಗ್ ಲೈಸನ್ಸ್ ಹಾಗೂ ಇನ್ಸೂರೆನ್ಸ್ ಇಲ್ಲದೆ ವಾಹನ ಚಲಾಯಿಸಲು ಆರಂಭಿಸಿದ್ದ.

50 ವರ್ಷಗಳ ಕಾಲ ಡಿಎಲ್ ಇಲ್ಲದೆ ಗಾಡಿ ಓಡಿಸಿದ್ರೂ ಆತ ಒಮ್ಮೆಯೂ ಸಿಕ್ಕಿಬಿದ್ದಿರಲಿಲ್ಲ. ಅಪ್ರಾಪ್ತನಾಗಿದ್ದಾಗಲೇ ವಾಹನ ಚಲಾಯಿಸಲು ಆರಂಭಿಸಿದ್ದ. ಈ ವ್ಯಕ್ತಿ ಲೈಸನ್ಸ್ ಪಡೆಯಲು ಅರ್ಹನಾದ ವಯಸ್ಸಿಗೆ ಬಂದ ಮೇಲೂ ಡಿಎಲ್ ಮಾಡಿಸುವ ಗೊಡವೆಗೆ ಹೋಗಲೇ ಇಲ್ಲ. 1935ರಲ್ಲೇ ಬ್ರಿಟನ್ ನಲ್ಲಿ ಎಲ್ಲಾ ವಾಹನ ಚಾಲಕರಿಗೆ ಕಡ್ಡಾಯ ಪರೀಕ್ಷೆಯನ್ನು ಜಾರಿಗೆ ತರಲಾಗಿದೆ. ಆದರೂ ಈತ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಬಿಂದಾಸ್ ಆಗಿ 50 ವರ್ಷ ಕಾರು ಚಲಾಯಿಸಿದ್ದಾನೆ.

ಬ್ರಿಟನ್ ನಲ್ಲಿ ಡ್ರೈವಿಂಗ್ ಲೈಸನ್ಸ್ ಹಾಗೂ ಇನ್ಶುರೆನ್ಸ್ ಇಲ್ಲದೆ ವಾಹನ ಚಲಾಯಿಸಿದ್ರೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತದೆ. ಅಂಥದ್ರಲ್ಲಿ 5 ದಶಕಗಳ ಕಾಲ ಪರವಾನಿಗೆ ಇಲ್ಲದೆ ಕಾರು ಚಲಾಯಿಸಿದ ಈ ಭೂಪ ಹೊಸ ದಾಖಲೆಯನ್ನೇ ಮಾಡಿದ್ದಾನೆ ಅಂತಾ ಜಾಲತಾಣಗಳಲ್ಲಿ ಕಮೆಂಟ್ ಗಳು ಹರಿದಾಡ್ತಾ ಇವೆ.

Leave A Reply

Your email address will not be published.