ಮನೆಗೆ ಬೆಂಕಿ ಹಚ್ಚಿ ಗೃಹೋಪಯೋಗಿ ವಸ್ತುಗಳನ್ನೆಲ್ಲ ಸರ್ವನಾಶ ಮಾಡಿದ ಒಂದು ಪುಟ್ಟ ‘ಇಲಿ’|ಅಷ್ಟಕ್ಕೂ ಇದು ಮಾಡಿದ ಕೆಲಸ ಏನು ಗೊತ್ತಾ!?

ಇಲಿಗಳ ಕಾಟ ಅಷ್ಟಿಷ್ಟಲ್ಲ. ಒಮ್ಮೆ ಮನೆ ಹೊಕ್ಕಿತೆಂದರೆ ಸಾಕು, ಇಡೀ ಮನೆಯನ್ನೇ ಗಲಿ-ಬಿಲಿ ಮಾಡಿಬಿಡುತ್ತೆ.ಇರೋ ಬರೋ ವಸ್ತುಗಳನ್ನೆಲ್ಲ ಪೀಸ್ ಪೀಸ್ ಮಾಡಿರುತ್ತೆ. ಆದ್ರೆ ಇಲ್ಲೊಂದು ಕಡೆ ಇದಕ್ಕಿಂತಲೂ ಮಿಗಿಲಾಗಿ ಒಂದು ಸಣ್ಣ ಇಲಿ ಮನೆಯನ್ನೇ ಸರ್ವ ನಾಶ ಮಾಡಿದೆ!

ಹೌದು.ಇಲಿಯ ಆಟಕ್ಕೆ ಮನೆ ಬೆಂಕಿಗಾಹುತಿಯಾದ ಘಟನೆ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದಿದೆ. ಮನೆಯಲ್ಲಿ ದೇವರ ದೀಪಕ್ಕೆ ಬತ್ತಿ ಇಟ್ಟು ದೀಪ ಹಚ್ಚಲಾಗಿತ್ತು. ಈ ದೀಪ ಉರಿಯುತ್ತಿರುವಾಗಲೇ ಇಲಿಯೊಂದು ಬತ್ತಿಯನ್ನು ಹೊತ್ತೋದದ್ದು ಅಲ್ಲದೇ ಉರಿಯುತ್ತಿದ್ದ ಬತ್ತಿಯೊಂದಿಗೆ ಮನೆ ತುಂಬೆಲ್ಲಾ ಓಡಾಡಿದೆ.ಇದರಿಂದಾಗಿ ಇಡೀ ಮನೆಯೇ ಹೊತ್ತಿ ಉರಿಯುವಂತಾಗಿದೆ.


Ad Widget

Ad Widget

Ad Widget

ಇಲಿಯ ಈ ಒಂದು ಅವಘಡದಿಂದಾಗಿ ಮನೆಯಲ್ಲಿ ಇಟ್ಟಿದಂತಹ ಎರಡು ಲಕ್ಷ ನಗದು ಹಾಗೂ ಇನ್ನಿತರ ವಸ್ತುಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.ಕರ್ಮಭೂಮಿ ಸೊಸೈಟಿಯಲ್ಲಿರುವ ಉದ್ಯಮಿ ವಿನೋದ್ ಅವರ ಮನೆಯಲ್ಲಿ ನಿನ್ನೆ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಬೆಂಕಿ ಹೊತ್ತಿ ಉರಿಯಲಾರಂಭಿಸಿದ ನಂತರ ಅಗ್ನಿಶಾಮಕ ಸಿಬ್ಬಂದಿಗ ಮಾಹಿತಿ ನೀಡಿದ್ದು, ಬಳಿಕ ಅವರು ಬಂದು ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಗೃಹಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ.ಚೈತ್ರ ನವರಾತ್ರಿಯ ನಿಮಿತ್ತ ವಿನೋದ್ ಭಾಯ್ ಅವರ ಮನೆಯಲ್ಲಿ ಪೂಜೆ ಏರ್ಪಡಿಸಲಾಗಿತ್ತು. ಈ ಹಿನ್ನೆಲೆ ದೀಪಗಳನ್ನು ಬೆಳಗಿಸಲಾಗಿದ್ದು,ಬಳಿಕ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರು. ಅಷ್ಟರಲ್ಲಿ ಕೋಣೆಯಿಂದ ಹೊಗೆ ಬರುತ್ತಿರುವುದನ್ನು ಕಂಡು ಯಾರೋ ಬೊಬ್ಬೆ ಹೊಡೆಯಲು ಶುರು ಮಾಡಿದ್ದಾರೆ.ಅಷ್ಟರಲ್ಲೇ ಮನೆಯಿಂದ ಹೊರಬಂದರೂ ಗೃಹೋಪಯೋಗಿ ವಸ್ತುಗಳನ್ನು ಉಳಿಸುವಲ್ಲಿ ವಿಫಲರಾದರು.ಅಕ್ಕಪಕ್ಕದವರು ನೀರಿನ ಮೋಟರ್‌ ಹಾಕಿ ಬೆಂಕಿ ನಂದಿಸಲು ಯತ್ನಿಸಿದರಾದರೂ, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ.

Leave a Reply

error: Content is protected !!
Scroll to Top
%d bloggers like this: