ತಾನು ಪಡೆದಿದ್ದ ಲಾಟರಿ ಟಿಕೆಟ್ ಗೆ 1 ಕೋಟಿ ಸಿಗುತ್ತಿದ್ದಂತೆಯೇ ಬಾಳೆ ತೋಟದಲ್ಲಿ ಅವಿತುಕುಳಿತ ವ್ಯಕ್ತಿ !! | ಅಷ್ಟಕ್ಕೂ ಆತ ಅಲ್ಲಿ ಕೂರಲು ಕಾರಣ??

0 9

ಕೆಲವೊಮ್ಮೆ ಅದೃಷ್ಟವೊಂದು ಚೆನ್ನಾಗಿದ್ದರೆ ಯಾವುದೇ ಶ್ರಮವಿಲ್ಲದೆ ಶ್ರೀಮಂತರಾಗಿಬಿಡಬಹುದು. ಅದೆಲ್ಲ ಕನಸಲ್ಲಿ ಅಥವಾ ಸಿನಿಮಾದಲ್ಲಿ ಮಾತ್ರ ಸಾಧ್ಯ ಎಂದುಕೊಳ್ಳಬೇಡಿ. ನಿಜಜೀವನದಲ್ಲೂ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಲಾಟರಿ ಮೇಲೆ ಹಣ ಸುರಿಯೋದು ಜೂಜಾಟ ಇದ್ದಂತೆ. ಆದ್ರೂ ಕೆಲ ಜನರು ಮಾತ್ರ ಲಾಟರಿ ಮೇಲೆ ಜನರು ತಮ್ಮ ದಿನನಿತ್ಯದ ಒಂದು ಭಾಗವನ್ನು ಅದಕ್ಕಾಗಿ ಮೀಸಲು ಇಡ್ತಾರೆ. ಆದ್ರೆ ಅದೃಷ್ಟ ಲಕ್ಷ್ಮಿ ಯಾರಿಗೆ ಒಲಿಯುತ್ತೋ ಅನ್ನೋದು ಮಾತ್ರ ಸರ್ಪ್ರೈಸ್.

ಹೌದು. ಪಶ್ಚಿಮ ಬಂಗಾಳ ಮೂಲದ ಓರ್ವ ದಿನಗೂಲಿ ಕಾರ್ಮಿಕನಿಗೆ ಲಾಟರಿಯಲ್ಲಿ ಒಂದು ಕೋಟಿ ರೂ. ಬಹುಮಾನ ಸಿಕ್ಕಿದೆ. ಇಂಥಾ ಅವಕಾಶ ಯಾರಿಗೆ ಸಿಗುತ್ತೆ ಹೇಳಿ… ಆದರೂ ಅಷ್ಟು ಮೊತ್ತದ ಲಾಟರಿ ಬಹುಮಾನ ಸಿಕ್ಕಾಗ ಆತ ಮಾಡಿದ್ದೇನು ಗೊತ್ತಾ?? ತನಗೆ ಲಾಟರಿ ತಗುಲಿದ ವಿಷಯ ತಿಳಿಯುತ್ತಲೇ ಕಾರ್ಮಿಕ ಬಾಳೆತೋಟದಲ್ಲಿ ಅವಿತು ಕೂರಬೇಕೆ !!

ಅರೇ ಲಾಟರಿಯಲ್ಲಿ ಹಣ ಸಿಕ್ಕರೆ ಅವರ ಕಾಲು ನೆಲದ ಮೇಲೆ ನಿಲ್ಲಲು ಸಾಧ್ಯವೇ ಇಲ್ಲ. ಈ ಗುಡ್ ನ್ಯೂಸ್ ತಿಳಿಯುತ್ತಲೇ ಈ ಹಣವನ್ನು ಹೇಗೆ ಖರ್ಚು ಮಾಡಬೇಕೆಂಬ ಆಲೋಚನೆಯಲ್ಲಿ ಮುಳುಗಿರುತ್ತಾರೆ. ಅದಲ್ಲದೆ ಈ ಹಣದಿಂದ ಎಲ್ಲಾ ಆರ್ಥಿಕ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು. ಹೀಗಿರುವಾಗ ಅದನ್ನೆಲ್ಲಾ ಬಿಟ್ಟು ಆತ ಬಾಳೆತೋಟದಲ್ಲಿ ಅವಿತಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ನಿವಾಸಿಯಾಗಿರೋ ದಿನಗೂಲಿ ನೌಕರ , ಪ್ರತಿದಿನ ತಾನು ದುಡಿದ ಹಣದಲ್ಲಿ ಒಂದು ಲಾಟರಿ ಖರೀದಿಸುತ್ತಿದ್ದನು. ಈತನನ್ನು ಕಂಡ ಜನರು ಲಾಟರಿ ಹುಚ್ಚ ಎಂದು ಕರೆಯುತ್ತಿದ್ದರು. ಆ ದಿನಗೂಲಿ ನೌಕರ ಮಾತ್ರ ಲಾಟರಿ ಖರೀದಿ ಮಾಡೋದನ್ನು ನಿಲ್ಲಿಸಿರಲಿಲ್ಲ. ಕೆಲ ದಿನಗಳ ಹಿಂದೆ ತಾನು ಖರೀದಿಸಿದ ಲಾಟರಿ ಒಂದು ಕೋಟಿ ಹಣ ಸಿಕ್ಕಿದ ವಿಷಯ ತಿಳಿಯುತ್ತಲೇ ಆತ ಭಯಗೊಂಡಿದ್ದನು.
ಭಯಗೊಂಡ ಕಾರ್ಮಿಕ ಲಾಟರಿ ಟಿಕೆಟ್ ಜೊತೆ ಅಜ್ಞಾತನಾಗಿದ್ದನು. ಇನ್ನೂ ಕಾರ್ಮಿಕ ಮನೆಗೆ ಬರದೇ ಇದ್ದಾಗ ಕುಟುಂಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಳೆತೋಟದಲ್ಲಿ ಅವಿತುಕೊಂಡಿದ್ದ ಕಾರ್ಮಿಕನನ್ನು ಪತ್ತೆ ಮಾಡಿದ್ದಾರೆ. ಪೊಲೀಸರ ಮುಂದೆ ತಾನು ಯಾಕೆ ಅವಿತುಕೊಂಡೇ ಎಂಬ ವಿಚಾರವನ್ನು ಹೇಳಿದ್ದಾನೆ. ತನಗೆ ಲಾಟರಿ ಸಿಕ್ಕಿರುವ ವಿಷಯ ತಿಳಿದ್ರೆ, ದುಷ್ಕರ್ಮಿಗಳು ನನ್ನ ಟಿಕೆಟ್ ಕಳ್ಳತನ ಮಾಡುವ ಭಯ ಹುಟ್ಟಿಕೊಂಡಿತ್ತು. ಹಾಗಾಗಿ ಬಾಳೆತೋಟ ಸೇರಿದ್ದೆ ಎಂದು ತಿಳಿಸಿದ್ದಾನೆ.

ಲಾಟರಿಯಲ್ಲಿ ಬಂದ ಹಣದಿಂದ ಮೊದಲು ತನ್ನ ಎಲ್ಲ ಸಾಲಗಳನ್ನು ಪಾವತಿ ಮಾಡುತ್ತೇನೆ. ನಂತರ ಸುಂದರವಾದ ಮನೆ ಕಟ್ಟುವ ಆಸೆಯನ್ನು ದಿನಗೂಲಿ ಕಾರ್ಮಿಕ ಹೇಳಿಕೊಂಡಿದ್ದಾನೆ. ಅದಲ್ಲದೆ ಇದೇ ರೀತಿ ಕೆಲವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲೇ ದಿಢೀರ್ 1 ಕೋಟಿ ಲಾಟರಿ ಗೆದ್ದ ಯುವಕನೊಬ್ಬ ಸೀದಾ ಪೊಲೀಸ್ ಸ್ಟೇಶನ್ ಗೆ ಹೋಗಿ ಕೂತಿದ್ದ ಘಟನೆಯೊಂದು ಬೆಳಕಿಗೆ ಬಂದಿತ್ತು.

Leave A Reply