ಈ ಫ್ಯಾನ್ ವಿದ್ಯುತ್ ಇಲ್ಲದೆಯೇ 15 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆಯಂತೆ !! | ಈ ಸ್ಪೆಷಲ್ ಫ್ಯಾನ್ ಗಳ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಬೇಸಿಗೆ ಕಾಲ ಈಗಾಗಲೇ ಆರಂಭವಾಗಿದೆ. ಬೇಸಿಗೆಯ ಬಿಸಿಲಿನ ಬೇಗೆ ಒಂದೆಡೆಯಾದರೆ, ಪವರ್ ಕಟ್ ಸಮಸ್ಯೆ ಇನ್ನೊಂದೆಡೆ. ಮನೆಯಲ್ಲಿ ಸೆಖೆಯಿಂದ ಮುಕ್ತಿಪಡೆಯಲು ಫ್ಯಾನ್ ಬೇಕೇ ಬೇಕು. ಆದರೆ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿ ಅಳವಡಿಸಿರುವ ಫ್ಯಾನ್‌ಗಳೂ ಕೂಡ ಕೆಲಸಕ್ಕೆ ಬರುವುದಿಲ್ಲ. ಅದಲ್ಲದೆ ನಮ್ಮ ದೇಶದಲ್ಲಿ ಪ್ರತಿ ಮನೆಯೂ ಇನ್ವರ್ಟರ್ ಹೊಂದಿರುವುದಿಲ್ಲ. ಹಾಗಾಗಿ ಹಲವು ಬಾರಿ ವಿದ್ಯುತ್ ಇಲ್ಲದೆ ಗಂಟೆಗಟ್ಟಲೆ ಸೆಕೆಯಲ್ಲೇ ಬೆಂದು ಕಾಲ ಕಳೆಯಬೇಕಾಗುತ್ತದೆ.

ಆದರೆ ಇದಕ್ಕೊಂದು ಪರಿಹಾರವಿದೆ. ಇದರಿಂದ ನೀವು ವಿದ್ಯುತ್ ಇಲ್ಲದೆಯೂ ಫ್ಯಾನ್ ಉಪಯೋಗಿಸಬಹುದು. ಹೌದು. ನೀವು ಬೇಸಿಗೆಯಲ್ಲಿ ಹೊಸ ಫ್ಯಾನ್ ಖರೀದಿಸಲು ಯೋಜಿಸುತ್ತಿದ್ದರೆ, ಈ ಫ್ಯಾನ್ ಗಳನ್ನೇ ಖರೀದಿಸಿ. ವಿದ್ಯುತ್ ಇಲ್ಲದೆ ಹಲವು ಗಂಟೆಗಳ ಕಾಲ ಕೆಲಸ ಮಾಡಬಲ್ಲ ಫ್ಯಾನ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.


Ad Widget

Ad Widget

Ad Widget

Fippy MR-2912

Fippy MR-2912 ಇದು ರಿಚಾರ್ಜ್ ಮಾಡಬಹುದಾದ ಬ್ಯಾಟರಿ ಟೇಬಲ್ ಫ್ಯಾನ್. ಮೂರು ಬ್ಲೇಡ್‌ಗಳನ್ನು ಹೊಂದಿರುವ ಈ ಫ್ಯಾನ್ ಬಿಳಿ ಬಣ್ಣದ ಆಯ್ಕೆಯಲ್ಲಿ ಬರುತ್ತದೆ. ನೀವು ಅದನ್ನು ಗೋಡೆಯ ಮೇಲೆ ಫಿಟ್ ಮಾಡಬಹುದು ಅಥವಾ ಮೇಜಿನ ಮೇಲೆ ಇರಿಸುವ ಮೂಲಕ ಅದನ್ನು ಬಳಸಬಹುದು. ಅಷ್ಟೇ ಅಲ್ಲ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಇದನ್ನು ಅಡುಗೆಮನೆ, ಮಲಗುವ ಕೋಣೆ, ಲಿವಿಂಗ್ ರೂಂ ಮತ್ತು ಊಟದ ಕೋಣೆಯಲ್ಲಿ ಬಳಸಬಹುದು. ಸಂಪರ್ಕಕ್ಕಾಗಿ ಇದು ಯುಎಸ್‌ಬಿ ಮತ್ತು ಎಸಿ ಡಿಸಿ ಮೋಡ್‌ಗಳನ್ನು ಹೊಂದಿದೆ. ಪೂರ್ಣ ಚಾರ್ಜ್‌ನಲ್ಲಿ, ಇದು ಪೂರ್ಣವಾಗಿ 3.5 ಗಂಟೆಗಳವರೆಗೆ, ಮಧ್ಯಮದಲ್ಲಿ 5.5 ಗಂಟೆಗಳವರೆಗೆ ಮತ್ತು ಕಡಿಮೆ ಸ್ಪೀಡ್ ಜೊತೆಗೆ ಸುಮಾರು 9 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಅಮೆಜಾನ್ ನಲ್ಲಿ ಕೇವಲ 3,299 ರೂ.ಗೆ ಖರೀದಿಸಬಹುದು.

ಸ್ಮಾರ್ಟ್‌ಡೆವಿಲ್ ಪೋರ್ಟಬಲ್ ಟೇಬಲ್ ಫ್ಯಾನ್:

ಸ್ಮಾರ್ಟ್‌ಡೆವಿಲ್ ಪೋರ್ಟಬಲ್ ಟೇಬಲ್ ಫ್ಯಾನ್ ಬಲವಾದ ಬ್ಯಾಟರಿಯೊಂದಿಗೆ ಬರುತ್ತದೆ. ಈ ಪೋರ್ಟಬಲ್ ವೈಯಕ್ತಿಕ ಡೆಸ್ಕ್‌ಟಾಪ್ ಟೇಬಲ್ ಫ್ಯಾನ್ ಶಬ್ದ-ಮುಕ್ತ ಗಾಳಿಯನ್ನು ನೀಡುತ್ತದೆ. ತುಂಬಾ ಫ್ಲೆಕ್ಸಿಬಲ್ ಆಗಿರುವ ಈ ಫ್ಯಾನ್ ಅನ್ನು ನಿಮ್ಮ ಮನೆ ಅಥವಾ ಕಛೇರಿಯಲ್ಲಿ ಸುಲಭವಾಗಿ ಬಳಸಬಹುದು. ಇದು 3000mAh ನ ಪ್ರಬಲ ಬ್ಯಾಟರಿಯನ್ನು ಹೊಂದಿದೆ. ಪೂರ್ಣ ಚಾರ್ಜ್ ಮಾಡಿದರೆ ಈ ಫ್ಯಾನ್ ಕರೆಂಟ್ ಇಲ್ಲದೆಯೂ 14 ರಿಂದ 15 ಗಂಟೆಗಳ ಕಾಲ ಬಾಳಿಕೆ ಬರಬಹುದು ಎಂದು ಹೇಳಲಾಗಿದೆ. ನೀವು ಇದನ್ನು ಅಮೆಜಾನ್‌ನಲ್ಲಿ 1,999 ರೂ.ಗೆ ಖರೀದಿಸಬಹುದು.

ಬಜಾಜ್ PYGMY ಮಿನಿ 110 MM 10 W ಫ್ಯಾನ್:

ಕಡಿಮೆ ಬಜೆಟ್ ಬಜಾಜ್ ಫ್ಯಾನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಉತ್ತಮ ವಿನ್ಯಾಸದಲ್ಲಿ ಬರುತ್ತಿರುವ ಈ ಫ್ಯಾನ್ ಯುಎಸ್‌ಬಿ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಇದು Li-Ion ಬ್ಯಾಟರಿಯನ್ನು ಹೊಂದಿದ್ದು, ಪೂರ್ಣ ಚಾರ್ಜ್ ಮಾಡಿದ ನಂತರ 4 ಗಂಟೆಗಳವರೆಗೆ ಇರುತ್ತದೆ. ಇದು ಕ್ಲಿಪ್ ಅನ್ನು ಹೊಂದಿದ್ದು, ನೀವು ಅದನ್ನು ಮೇಜಿನ ಮೇಲೆ ಅಥವಾ ಯಾವುದೇ ಗಟ್ಟಿಮುಟ್ಟಾದ ಸ್ಥಳದಲ್ಲಿ ಹೊಂದಿಸಬಹುದು. ಇದು ಕಾಂಪ್ಯಾಕ್ಟ್ ಗಾತ್ರದಲ್ಲಿ ಬರುತ್ತದೆ ಮತ್ತು ಎಲ್ಲಿ ಬೇಕಾದರೂ ಹೊಂದಿಕೊಳ್ಳುತ್ತದೆ. ನೀವು ಇದನ್ನು ಅಮೆಜಾನ್‌ನಲ್ಲಿ 1,170 ರೂ.ಗೆ ಇದನ್ನು ಖರೀದಿಸಬಹುದು.

Leave a Reply

error: Content is protected !!
Scroll to Top
%d bloggers like this: