ಮೂಡುಬಿದಿರೆ : ಯುವ ಉದ್ಯಮಿ ವಿಷ ಸೇವಿಸಿ ಆತ್ಮಹತ್ಯೆ

Share the Article

ಮಂಗಳೂರು : ಮೂಡುಬಿದಿರೆ ಸಮೀಪದ ಮೂಡುಕೊಣಾಜೆಯ ನಿವಾಸಿ ಯುವ ಉದ್ಯಮಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಮಂಗಳವಾರ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಮೂಡುಕೊಣಾಜೆಯ ರಾಘವ ಸುವರ್ಣ ಅವರ ಪುತ್ರ ರೋಶನ್ ಆರ್ ಸುವರ್ಣ ಎಂದು ಗುರುತಿಸಲಾಗಿದೆ.

ಯುಗಾದಿಯಂದು ಮೂಡುಬಿದಿರೆಯಲ್ಲಿ “ಅಬ್ಬಕ್ಕ” ಎಂಬ ಹೆಸರಿನಲ್ಲಿ ಆರಂಭಗೊಂಡಿರುವ ಬೇಕರಿಯಲ್ಲಿ ಪಾಲುದಾರರಾಗಿದ್ದು ಚಿತ್ರನಟ ವಿಜಯ ರಾಘವೇಂದ್ರ ಅವರನ್ನು ಕರೆಸಿ ಬೇಕರಿಯನ್ನು ಉದ್ಘಾಟನೆಗೊಳಿಸಿದ್ದರು.

ಮಂಗಳವಾರ ಬೆಳಗ್ಗೆ 11 ಗಂಟೆಯವರೆಗೆ ಬೇಕರಿಯಲಿದ್ದ ಅವರು ನಂತರ ಮನೆಗೆ ಹೋಗಿದ್ದರು. ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply