ಗುಂಡ್ಯ ರಿಕ್ಷಾದಲ್ಲಿ ಅಂತರ್‌ಧರ್ಮೀಯ ಜೋಡಿ ಪತ್ತೆ : ಯು.ಟಿ.ಖಾದರ್ ಹೆಸರು ಬಳಸಿ ವರದಿ-ದೂರು ನೀಡುವ ಎಚ್ಚರಿಕೆ

Share the Article

ಗುಂಡ್ಯ ಸಮೀಪದ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ರಿಕ್ಷಾದಲ್ಲಿ ಅಂತರ್‌ಧರ್ಮೀಯ ಜೋಡಿ ಪತ್ತೆ ಪ್ರಕರಣದಲ್ಲಿ ಮುಸ್ಲಿಂ ಯುವಕನ ಪರ ವಹಿಸಿದ್ದಾರೆ ಎಂದು ಮಾಜಿ ಸಚಿವ,ಉಳ್ಳಾಲ ಶಾಸಕ ಯು.ಟಿ ಖಾದರ್ ಅವರನ್ನು ಬಿಂಬಿಸಿ ಮಾಧ್ಯಮಗಳು ವರದಿ ಪ್ರಕಟಿಸಿದೆ.

ತನ್ನ ಹೆಸರು ಬಳಸಿ ಕಪೋಲ ಕಲ್ಪಿತ ವರದಿ ಪ್ರಕಟಿಸಿದ ಆರೋಪದ ಮೇಲೆ ಕೆಲ ಅನ್ಲೈನ್ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ವಿರುದ್ದ ದೂರು ನೀಡುವ ಎಚ್ಚರಿಕೆಯನ್ನು ಯು.ಟಿ.ಖಾದರ್ ನೀಡಿದ್ದಾರೆ.

ಈ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ವಿನಾ ಕಾರಣ ನನ್ನ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಎಳೆದು ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.

Leave A Reply