HIV ಪಾಸಿಟಿವ್ ಚಿಕ್ಕಮ್ಮನಿಂದ 15 ವರ್ಷದ ಬಾಲಕನ ಜೊತೆ ದೈಹಿಕ ಸಂಬಂಧ…!

Share the Article

ತನ್ನ 15 ವರ್ಷದ ಸಂಬಂಧಿಗೆ ಏಡ್ಸ್ ಸೋಂಕು ತಗುಲಿಸಬೇಕೆಂಬ ಉದ್ದೇಶದಿಂದಲೇ ಆಕೆ ಬಾಲಕನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಳು ಎಂದು ತಿಳಿದು ಬಂದಿದೆ.

ರುದ್ರಾಪುರ ಟ್ರಾನ್ಸಿಟ್ ಕ್ಯಾಂಪ್ ನಿವಾಸಿಯಾದ ಮಹಿಳೆ ತನ್ನ ಗ್ರಾಮವಾದ ಪಿಲಿಭಿಟ್, ಪುರಸ್ಪುರಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಕೆಗೆ ಈ ಹುಡುಗನ ಪರಿಚಯವಾಗಿದೆ.

ಈ ಮಹಿಳೆ ಅಪ್ರಾಪ್ತ ಸಂಬಂಧಿ ಬಾಲಕನನ್ನು ತನ್ನ ಬಲೆಗೆ ಬೀಳಿಸಿಕೊಂಡು ಅವನೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದಾಳೆ. ಕೆಲವು ದಿನಗಳ ನಂತರ, ಹುಡುಗ ತನ್ನ ಕುಟುಂಬ ಸದಸ್ಯರೊಂದಿಗೆ
ಟ್ರಾನ್ಸಿಟ್ ಕ್ಯಾಂಪ್ ಗೆ ಬಂದಾಗ, ಮಹಿಳೆ ಮತ್ತೆ ಅವನೊಂದಿಗೆ ಲೈಂಗಿಕ ಸಂಬಂಧ ಮಾಡಿದ್ದಾಳೆ.ಆದರೆ ಬಾಲಕನಿಗೆ ಅನಂತರ ತನ್ನ ಚಿಕ್ಕಮ್ಮ ಎಚ್‌ಐವಿ ಪಾಸಿಟಿವ್ ಎಂದು ತಿಳಿದು ಬಂದಿದೆ. ಹೆದರಿದ ಬಾಲಕ ನಡೆದ ಘಟನೆಯ ಬಗ್ಗೆ ಆತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾನೆ. ನಂತರ ಕುಟುಂಬದವರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Leave A Reply