ಹಿಂದೂ ಹುಡುಗಿ ಹಾಗೂ ಮುಸ್ಲಿಂ ಹುಡುಗ ಪ್ರೀತಿ ಮಾಡಿ, ರಿಜಿಸ್ಟರ್ ಮದುವೆಯಾಗಿರುವ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.
ಈ ಪ್ರೇಮ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹಿಂದು ಹುಡುಗಿ ಹಾಗೂ ಮುಸ್ಲಿಂ ಹುಡುಗನ ಕಥೆ ಲವ್ ಜಿಹಾದ್ ಕಡೆಗೆ ದಾರಿ ಮಾಡಿಕೊಟ್ಟಿದೆ. ಯುವತಿಯ ಪೋಷಕರು ಇದು ಲವ್ ಜಿಹಾದ್ ಎಂದಿದ್ದು, ಇಲ್ಲಿನ ಉಪನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಪ್ರೀತಿ ಹೆಸರಲ್ಲಿ ನಡೆದಿರುವ ಲವ್ ಜಿಹಾದ್ ಇದಾಗಿದೆ. ಮದುವೆಯಾದ ಬಳಿಕ ಆಕೆಯನ್ನು ಮತಾಂತರ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಯುವತಿ ಇಲ್ಲಿನ ಕಮರಿಪೇಟೆ ನಿವಾಸಿಯಾಗಿದ್ದರೆ, ಮುಸ್ಲಿಂ ಯುವಕ ಇಬ್ರಾಹಿಂ ಕೇಶಾವಾಪುರ ನಿವಾಸಿಯಾಗಿದ್ದಾರೆ.

ಯುವತಿಯ ಪೋಷಕರೊಂದಿಗೆ ಸಾಕಷ್ಟು ಜನ ಬೆಂಬಲಕ್ಕೆ ಬಂದಿದ್ದು, ಪೊಲೀಸ್ ಠಾಣೆಯ ಮುಂದೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗಿದೆ. ಈ ನಡುವೆ ಇವರಿಬ್ಬರೂ ಗದಗ್ ನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಕೂಡ ಆಗಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.