ಅಯ್ಯೋ!!!ಹುಡುಗಿ ನೋಡೋಕೆ ಮುದ್ದಾಗಿದ್ದಾಳೆ ಅಂತ ಲೈವ್ ವೀಡಿಯೋನಲ್ಲಿ ಬೆತ್ತಲಾದ| ಅನಂತರ ನಡೆದದ್ದೇ ಬೇರೆ!!!

Share the Article

ಸಾಮಾಜಿಕ ಜಾಲತಾಣಗಳಲ್ಲಿ ಜನ ಆನ್‌ಲೈನ್ ಡೇಟಿಂಗ್, ಚಾಟಿಂಗ್, ಫ್ಲರ್ಟಿಂಗ್ ಅಂತ ಏನೇನೋ ಮಾಡುತ್ತಾ ಕಾಲ ಕಳೀತಾರೆ. ಎಷ್ಟೋ ಮಂದಿ ಇದರಿಂದಲೇ ತಮ್ಮ ಬಾಳು ಹಾಳು ಮಾಡಿಕೊಂಡಿದ್ದಾರೆ, ಕೆಲವರು ಮೂರ್ಖರಾಗಿದ್ದಾರೆ. ಅನಂತರ ಪೊಲೀಸ್, ಕೋರ್ಟ್ ಅಂತ ಅಲೆದಾಡಿ ನೆಮ್ಮದಿ ಇಲ್ಲದೇ ಇರ್ತಾರೆ.

ಇದು ಅಂತದ್ದೇ ಒಬ್ಬ 24 ವರ್ಷದ ಯುವಕನ ಕತೆ. ಈ ಕತೆ ಕೇಳಿದ್ರೆ ನಗು ಬರಬಹುದು, ಆದರೆ ಆತ ಅನುಭವಿಸಿದ ಹಿಂಸೆ ಮಾತ್ರ ಪಾಪ ಅನ್ನಿಸುವಂತೆ ಮಾಡಲಿದೆ. 24 ವರ್ಷದ ಯುವಕನ ಆನ್‌ಲೈನ್ ಪ್ರೇಮ ಪುರಾಣದ ಕತೆ ಇಲ್ಲಿದೆ.

ಈ ಕತೆಯಲ್ಲಿ ಮೋಸಹೋದ ಹುಡುಗ ಎಂಬಿಎ ವಿದ್ಯಾರ್ಥಿ. ಮುಂಬೈನ ಅಂಧೇರಿಯಲ್ಲಿ ಈತ ವಾಸಿಸುತ್ತಿದ್ದಾನೆ. ಆನ್‌ಲೈನ್ ಡೇಟಿಂಗ್ ಆಪ್ ಒಂದರಲ್ಲಿ ಯುವತಿಯ ಪರಿಚಯವಾಗಿದೆ. ಯುವತಿಯ ಜೊತೆ ಹಲವು ದಿನಗಳ ಕಾಲ ಚಾಟಿಂಗ್ ಮಾಡಿದ್ದಾನೆ. ನಂಬಿಕೆ, ವಿಶ್ವಾಸ ಎಲ್ಲಾ ಮೂಡಿದೆ. ನಂತರ ಯುವತಿಯನ್ನು ಪ್ರೇಮಿಸಲು ಶುರು ಮಾಡಿದ್ದಾನೆ. ವಿಡಿಯೋ ಕಾಲ್‌ನಲ್ಲಿ ಬೆತ್ತಲೆಯಾಗಿ ಮಾತನಾಡಿದ್ದಾನೆ. ಆಕೆ ಇದನ್ನು ರೆಕಾರ್ಡ್ ಮಾಡಿಕೊಂಡು ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದಾಳೆ.

ಪೊಲೀಸರ ಮಾಹಿತಿ ಪ್ರಕಾರ ಈ ಘಟನೆ ಮಾರ್ಚ್ 31ರಂದು ನಡೆದಿದೆ. ಅಂದು ಯುವತಿ ವಿಡಿಯೋ ಕಾಲ್ ಮಾಡುವಂತೆ ಹೇಳಿದ್ದಾಳೆ. ಅಲ್ಲಿಯವರೆಗೂ ಆಕೆಯನ್ನು ನೋಡದೇ ಇದ್ದ ಯುವಕನಿಗೆ ಲೈವ್ ಕಾಲ್‌ನಲ್ಲಿ ನೋಡೋ ಭಾಗ್ಯ ಸಿಕ್ಕಿದೆ ಅಂತ ವಿಡಿಯೋ ಕಾಲ್ ಮಾಡಿದ್ದಾನೆ. ಆ ವೇಳೆ ಯುವತಿ ಬೆತ್ತಲೆಯಾಗಿರುವುದು ಕಂಡಿದೆ. ಇದನ್ನು ನೋಡಿದ ತಕ್ಷಣ, ಯುವಕ ತಾನೂ ಬಟ್ಟೆ ಬಿಚ್ಚಿ ಬೆತ್ತಲಾಗಿದ್ದಾನೆ. ಸುಮಾರು ನಿಮಿಷಗಳ ಕಾಲ ಆನ್‌ಲೈನ್ ಸರಸ ಸಲ್ಲಾಪ ನಡೆದಿದೆ.

ಆದರೆ ಕಹಾನಿ ಮೇ ಟ್ವಿಸ್ಟ್ ಏನೆಂದರೆ, ಹುಡುಗಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾಳೆ ಎಂಬ ಅರಿವು ಹುಡುಗನಿಗೆ ಇರಲಿಲ್ಲ. ಎಷ್ಟೆಂದರೂ ಪ್ರೀತಿಯಾಗಿತ್ತು, ನಂಬಿಕೆ ಗಾಢವಾಗಿತ್ತು. ಹುಡುಗಿ ತನ್ನ ಹೆಸರನ್ನು ಸೋನಿಯಾ ಎಂದು ಹೇಳಿಕೊಂಡಿದ್ದಳು. ಇದಾದ ನಂತರ ಹುಡುಗಿ ಹತ್ತು ಸಾವಿರ ಕೊಡು ಇಲ್ಲದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ನಿನ್ನ ಬೆತ್ತಲೆ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಧಮಕಿ ಹಾಕಿದ್ದಾಳೆ. ಒಂದೆಡೆ ಯುವಕನಿಗೆ ಪ್ರೀತಿಯ ಭ್ರಮನಿರಸನ, ಇನ್ನೊಂದೆಡೆ ಹತ್ತು ಸಾವಿರ ಕೊಡದಿದ್ದರೆ ವಿಡಿಯೋ ವೈರಲ್ ಆಗುವ ಭಯ.

ಆದರೂ ಧೈರ್ಯದಿಂದ ಆದದ್ದು ಆಗಲಿ ಎಂದು ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ. ಸೋನಿಯಾ ಹಣ ಹಾಕಲು ಗೂಗಲ್ ಪೇ ನಂಬರ್ ಒಂದನ್ನು ಕೊಟ್ಟಿದ್ದಳು, ಆ ನಂಬರ್ ಎಲ್ಲಿದೆ ಎಂಬ ಹುಡುಕಾಟದಲ್ಲಿ ಪೊಲೀಸರು ಈಗ ನಿರತರಾಗಿದ್ದಾರೆ.

Leave A Reply

Your email address will not be published.