ಇಂದು ಸಂಜೆಯಿಂದ ಮದ್ಯಪ್ರಿಯರಿಗೆ ಎಣ್ಣೆ ಇಲ್ಲ!!!
ಬೆಂಗಳೂರು: ರಾಜ್ಯದ ಬಾರ್ ಆಯಂಡ್ ರೆಸ್ಟೋರೆಂಟ್ಗಳಲ್ಲಿ ಮದ್ಯಪಾನ ಖಾಲಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ನೂತನ ಸಾಫ್ಟ್‌ವೇರ್ ಅಪ್ಡೇಟ್ ಆಗಿರುವ ಕಾರಣ ಬಿಲ್ ಮಾಡಲು ಆಗದೆ ಮದ್ಯ ಪೂರೈಕೆ ಆಗುತ್ತಿಲ್ಲ. ಕೆಎಸ್‌ಬಿಸಿಎಲ್‌ನಿಂದ (KSBCL) ಬಾರ್‌ಗಳಿಗೆ ಮದ್ಯ
ಪೂರೈಕೆಯಾಗುತ್ತಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆಯಿಂದ ರಾಜ್ಯದ ಎಣ್ಣೆ ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿದೆ. ಕೆಲ ಅಂಗಡಿಗಳಲ್ಲಿ ಅಲ್ಪ ಸ್ವಲ್ಪ ಎಣ್ಣೆ
ಇದೆ. ಇಂದು (ಏಪ್ರಿಲ್ 5) ಸಂಜೆ ವೇಳೆಗೆ ರಾಜ್ಯದ ಎಲ್ಲಾ ಅಂಗಡಿಗಳಲ್ಲಿ ಎಣ್ಣೆ ಸಂಪೂರ್ಣ ಖಾಲಿಯಾಗುವ ಸಾಧ್ಯತೆಯಿದೆ.
ನಿನ್ನೆಯಿಂದ ರಾಜ್ಯದಲ್ಲಿ ಮದ್ಯಪಾನ ಸಿಗುತ್ತಿಲ್ಲ. ನಿನ್ನೆಯಿಂದ ರಾಜ್ಯದ ಯಾವುದೇ CL-9 ಬಾರ್ ಅಂಡ್ ರೆಸ್ಟೋರೆಂಟ್, CL- 2 ವೈನ್ ಸ್ಟೋರ್, CL- 11C ಎಂಎಸ್ಎಐಎಲ್‌ಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದಿಂದ ಸಪ್ಲೈ ಆಗುತ್ತಿಲ್ಲ. ಕೆಎಸ್‌ಬಿಸಿಎಲ್‌ನಿಂದ ನಿಂದ ಪ್ರತಿದಿನ ಪೂರೈಕೆ ಆಗುತ್ತಿತ್ತು. ಆದರೆ ಹೊಸ ಬಿಲ್ಲಿಂಗ್ ವ್ಯವಸ್ಥೆಯಿಂದ ಕೆಎಸ್‌ಬಿಸಿಎಲ್‌ನಿಂದ ಬಿಲ್ ಆಗುತ್ತಿಲ್ಲ. ಹೀಗಾಗಿ ಮದ್ಯಪಾನ ಎಣ್ಣೆ ಸಿಗುತ್ತಿಲ್ಲ.