ಕಾಲೇಜಿಗೆ ಹೋಗದೆ ಗಾಂಜಾ ವ್ಯಸನಿಯಾಗಿದ್ದ 15 ವರ್ಷದ ಬಾಲಕ | ವಿದ್ಯುತ್ ಕಂಬಕ್ಕೆ ಕಟ್ಟಿ ಮೆಣಸಿನ ಹುಡಿ ಎರಚಿ ಶಿಕ್ಷೆ ನೀಡಿದ ತಾಯಿ!!!

ಈಗಿನ ಕಾಲದಲ್ಲಿ ಮಕ್ಕಳು ಸಣ್ಣ ಪ್ರಾಯದಲ್ಲೇ ಮದ್ಯವ್ಯಸನಿಯಾಗುವುದನ್ನು ನಾವು ಅಲ್ಲಿ ಇಲ್ಲಿ ನೋಡುತ್ತೇವೆ. ಧೂಮಪಾನ ಹಾಗೂ ಮದ್ಯಪಾನದ ಚಟ ಹೊಂದುವುದು ಇವೆಲ್ಲ ಯಾವುದೇ ಎಗ್ಗಿಲ್ಲದೇ ಯುವಕರು ಮಾಡುವುದು ನಮ್ಮ‌ ಕಣ್ಣಿಗೆ ದಿನನಿತ್ಯ ಬೀಳುವ ದೃಶ್ಯ. ಇಷ್ಟು ಸಣ್ಣ ಪ್ರಾಯದಲ್ಲಿ ಈ ಚಟಕ್ಕೆ ಬಿದ್ದದ್ದನ್ನು ಕಂಡಾಗ ನೋಡುವವರ ಮನಸ್ಸಿನಲ್ಲಿ ಏನಾಗುತ್ತಿದೆ? ಇಂದಿನ ಯುವ ಪೀಳಿಗೆಯಲ್ಲಿ ಎಂದು ಒಂದು ಪ್ರಶ್ನೆ ಮೂಡುವುದು ಸಹಜ. ಇಂತದ್ದೇ ಒಂದು ಚಟಕ್ಕೆ ಬಿದ್ದ ಯುವಕನಿಗೆ ಆತನ ತಾಯಿ ನೀಡಿದ ಕಠಿಣ ಶಿಕ್ಷೆ ಏನು ನೋಡಿ.


Ad Widget

ಗಾಂಜಾ ಚಟಕ್ಕೆ ದಾಸನಾಗಿದ್ದ ಮಗನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ ಶಿಕ್ಷೆ ನೀಡಿದ ತಾಯಿಯ ವಿಡಿಯೋ ಸಖತ್ ವೈರಲ್ ಆಗಿದೆ. ಗಾಂಜಾ ಚಟಕ್ಕೆ ಒಳಗಾಗಿ ಮನೆಗೆ ಬಾರದೇ ಅಲೆದಾಡುತ್ತಿದ್ದ ಮಗನಿಗೆ ಎಚ್ಚರಿಕೆ ನೀಡಿದ್ದರೂ, ಬದಲಾಗಿರಲಿಲ್ಲ. ಇದಕ್ಕಾಗಿ ತಾವೇ ಹೊಸ ರೀತಿಯಲ್ಲಿ ಶಿಕ್ಷೆ ನೀಡುವ ಮೂಲಕ ಗಮನಸೆಳೆದಿದ್ದಾರೆ ಈ ತಾಯಿ.

ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಕೊಡಾದ್ ಎಂಬಲ್ಲಿ ನಡೆದ ಈ ಘಟನೆಯ ವಿಡಿಯೋ ಸೋಮವಾರ ಇತ್ತೀಚೆಗೆ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ 15 ವರ್ಷದ ಮಗ ಗಾಂಜಾ ವ್ಯಸನಿಯಾಗುತ್ತಿರುವ ಬಗ್ಗೆ ಆತಂಕಗೊಂಡ ಮಹಿಳೆ ಆತನನ್ನು ಕಂಬಕ್ಕೆ ಕಟ್ಟಿ ಹಾಕಿದ್ದಾಳೆ. ಅಷ್ಟಕ್ಕೇ ನಿಲ್ಲದೆ ಮತ್ತೊಬ್ಬ ಮಹಿಳೆಯ ಸಹಾಯ ಪಡೆದುಕೊಂಡು, ಕಣ್ಣಿಗೆ ಖಾರದ ಪುಡಿ ಎರಚಿ ವಿಶೇಷ ರೀತಿಯಲ್ಲಿ ಶಿಕ್ಷೆ ನೀಡಿದ್ದಾಳೆ. ಕಣ್ಣಿನ ಉರಿಯಿಂದಾಗಿ ಬಾಲಕ ಕಿರುಚಾಡುತ್ತಿದ್ದರೆ, ಅಕ್ಕಪಕ್ಕದಲ್ಲಿದ್ದವರು ಕನಿಷ್ಠ ಆತನಿಗೆ ನೀರನ್ನಾದರೂ ನೀಡಿ ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸಿದೆ. ಗಾಂಜಾ ಸೇದುವ ಅಭ್ಯಾಸವನ್ನು ಬಿಡುವುದಾಗಿ ಭರವಸೆ ನೀಡಿದ ನಂತರವೇ ಮಹಿಳೆ ತನ್ನ ಮಗನನ್ನು ಕಂಬದಿಂದ ಬಿಚ್ಚಿದ್ದಾಳೆ.


Ad Widget

ಶಾಲೆಗೆ ಬಂಕ್ ಮಾಡಿ ಗಾಂಜಾ ಸೇದುತ್ತಿದ್ದರಿಂದ ತಾವು ಈ ಕಠಿಣ ಶಿಕ್ಷೆ ನೀಡಿದ್ದಾಗಿ ತಾಯಿ ಹೇಳಿದ್ದಾರೆ. ಪದೇ ಪದೇ ಬುದ್ಧಿ ಮಾತು ಹೇಳಿದರೂ ಕೇಳದ ಮಗನಿಗೆ ಈ ರೀತಿಯ ಶಿಕ್ಷೆ ನೀಡಿದ್ದಾರೆ ತಾಯಿ. ಈ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ತಾಯಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Ad Widget
error: Content is protected !!
Scroll to Top
%d bloggers like this: